ಬೆಂಗಳೂರು: ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ನಲಪಾಡ್‍ನೇ ಅಪಘಾತ ಎಸಗಿದ್ದು ಎನ್ನುವುದಕ್ಕೆ ಸಾಕ್ಷಿ ಲಭ್ಯವಾಗಿದೆ.
ನಲಪಾಡ್ ಓಡಿಸುತ್ತಿದ್ದ ಕಪ್ಪು ಕಲರ್ ಬೆಂಟ್ಲಿ ಕಾರಿನ ದೃಶ್ಯಗಳು ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಮಾಡಿದ್ದಾರೆ. ಏರ್‌ಪೋರ್ಟ್ ಟೋಲ್‍ನಿಂದ ಮೇಕ್ರಿ ಸರ್ಕಲ್‍ವರೆಗೆ ಪೊಲೀಸರು ಸಿಸಿಟಿವಿ ಚೆಕ್ ಮಾಡಿದ್ದಾರೆ. ಅಪಘಾತ ಮಾಡಿದ ದಿನ ಏರ್‌ಪೋರ್ಟ್ ಟೋಲ್‍ನಿಂದ ನಲಪಾಡ್ ವಾಹನ ಮೂವ್ ಆಗಿರಲಿಲ್ಲ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?
Advertisement
Advertisement
ಮೊಬೈಲ್ ಟವರ್ ಡಂಪ್ ಮತ್ತು ಪೊಲೀಸ್ ಪೇದೆಯೊಬ್ಬರ ಸಾಕ್ಷಿ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಲಪಾಡ್ ಅಪಘಾತ ಮಾಡಿರುವುದು ಎಂದು ಗೊತ್ತಾಗಿದ್ದರಿಂದಲೇ ನೋಟಿಸ್ ನೀಡಿದ್ದರು ಎನ್ನಲಾಗಿದೆ. ನಲಪಾಡ್ ಓಡಿಸುತ್ತಿದ್ದ ಬೆಂಟ್ಲಿ ಕಾರಿನ ಚಲನೆಯ ಸಿಸಿಟಿವಿ ವಿಡಿಯೋವನ್ನು ತೆಗೆದಿದ್ದಾರೆ. ಇದನ್ನೂ ಓದಿ: ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು
Advertisement
ಅಲ್ಲದೇ ಅಪಘಾತ ಆದ ದಿನ ಕರ್ತವ್ಯದಲ್ಲಿದ್ದ ಸಂಚಾರಿ ಪೇದೆ ಅಪಘಾತ ಮಾಡಿದ್ದು ನಲಪಾಡ್ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದರು. ನಲಪಾಡ್ ಟವರ್ ಡಂಪ್ ಸಹ ಮೇಕ್ರಿ ಸರ್ಕಲ್ ಬಳಿಯೇ ತೋರಿಸುತ್ತಿತ್ತು. ಇದೆಲ್ಲದರ ಸಾಕ್ಷಿಗಳ ಆಧಾರದ ಮೇಲೆ ನಲಪಾಡ್‍ಗೆ ನೋಟಿಸ್ ನೀಡಿ ಬಂಧಿಸಿ, ಬಳಿಕ ಜಾಮೀನು ಮಂಜೂರು ಮಾಡಿದ್ದಾರೆ.