ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಸಿದ್ಧ ವೇಣುಗೋಪಾಲ ಸ್ವಾಮೀ ದೇವಸ್ಥಾನಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ.
ಮಲ್ಲೇಶ್ವರಂನಾ 11 ನೇ ಕ್ರಾಸ್ ನಲ್ಲಿ ಇರೋ ವೇಣುಗೋಪಾಲ್ ಸ್ವಾಮಿ ದೇವಸ್ಥಾನದ ಪೂಜಾ ಸಮಯದಲ್ಲಿ ಜೋರಾಗಿ ಶಬ್ದ ಮಾಡ್ತಾರೆ ಅಂತಾ ಸಾರ್ವಜನಿಕರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರೆ. ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ನೋಟಿಸ್ ನೀಡಿದ್ದಾರೆ.
ಜೋರು ಶಬ್ದದಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿತೆ ತೊಂದರೆ ಆಗ್ತಿದೆ. ಶಬ್ದ ವಾಹಕದ ಮೂಲಕ ಶಬ್ಧ ಜೋರು ಮಾಡ್ತಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶದಲ್ಲಿ ರೂಲ್ಸ್ ಫಾಲೋ ಮಾಡುವಂತೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಪಲ್ಯೂಷನ್ 2000 ನಿಯಮದ ಶೆಡ್ಯೂಲ್ ರೂಲ್ 3(1) ಮತ್ತು 4 (1) ಪ್ರಕಾರ ಬೆಳ್ಳಗ್ಗೆ 6 ರಿಂದ ರಾತ್ರಿ 10ರವರೆಗೂ 55 ಡೆಸಿಬಲ್ ಮತ್ತು ರಾತ್ರಿ 10ರಿಂದ ಬೆಳ್ಳಗ್ಗೆ 6 ಗಂಟೆವರೆಗೂ 45 ಡೆಸಿಬಲ್ ಶಬ್ದ ಮಾಡದಂತೆ ಪೂಜಾ ಸಮಯದಲ್ಲಿ ಶಬ್ದವಾಹಕ ಬಳಸಲು ನೋಟೀಸ್ ನೀಡಲಾಗಿದೆ. Noise pollution 2000 ರೂಲ್ಸ್ ಪ್ರಕಾರನೇ ಶಬ್ದ ಬಳಕೆ ಮಾಡಬೇಕು. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂಬಂಧ ವೇಣುಗೋಪಾಲ ಸ್ವಾಮಿ ದೇಗುಲದ ಕಾರ್ಯನಿರ್ವಹಣಾಧಿಕಾರಿ, ಮುಜರಾಯಿ ಇಲಾಖೆ ತಹಶೀಲ್ದಾರ್ ಅರವಿಂದ್ ಬಾಬು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಡೆಸಿಬಲ್ ಮೀರುತ್ತಾ ಇದ್ದೀರಿ ಅಂತಾ ಪೊಲೀಸರು ನೊಟೀಸ್ ಕೊಟ್ಟಿದ್ದಾರೆ. ಸಾರ್ವಜನಿಕರಿಂದ ಪೊಲೀಸರಿಗೆ ಮೌಖಿಕ ದೂರು ಹೋಗಿದೆಯಂತೆ. ನಾವು ರೂಲ್ಸ್ ಫಾಲೋ ಮಾಡ್ತಾ ಇದ್ದೇವೆ. ರೂಲ್ಸ್ ಬ್ರೇಕ್ ಮಾಡ್ತಾ ಇಲ್ಲ. ಆದರೂ ಯಾಕೆ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ನಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡಿ ಈ ನೋಟೀಸ್ ಗೆ ರಿಪ್ಲೇ ಕೊಡುತ್ತೇನೆ. ಬೆಳಗ್ಗೆ ಪೂಜೆ ಮಾಡ್ತಾರೆ. ಆ ಸಮಯದಲ್ಲಿ ಗಂಟೆ ಮತ್ತು ತಮಟೆ ಶಬ್ದ ಮಾಡ್ತಾರೆ ಅಷ್ಟೇ. ಆ ಶಬ್ದ ಏನು ನಾವು ಡಿಸಿಬಲ್ ಮೀರಲ್ಲ. ನಾವು ಲೌಡ್ ಸ್ಪೀಕರ್ ಬಳಸಲ್ಲ. ಆದರೂ ಯಾಕೆ ನೋಟಿಸ್ ಕೊಟ್ರು ಅಂತಾ ನಾವು ರಿಪ್ಲೇ ಮಾಡುತ್ತೇವೆ ಎಂದು ತಿಳಿಸಿದರು.