ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಮಧ್ಯೆ ತಿನ್ನಲು ಆಹಾರ ಸಿಗದೇ ಅದೆಷ್ಟೋ ಮೂಕ ಪ್ರಾಣಿಗಳು ಬಳಲುತ್ತಿದೆ. ಹೀಗೆ ಹಸಿವಿನಿಂದ ರೋಧಿಸುತ್ತಿದ್ದ ಕೋತಿಗಳಿಗೆ ಸಿಲಿಕಾನ್ ಸಿಟಿ ಪೊಲೀಸರು ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಂದ್ ಆಗಿದೆ. ವ್ಯಾಪಾರಿಗಳು ತಮ್ಮ ಬಳಿ ಉಳಿಯುತ್ತಿದ್ದ ತರಕಾರಿ ಅಥವಾ ಹಣ್ಣುಗಳನ್ನು ಸ್ಥಳದಲ್ಲಿ ಇರುತ್ತಿದ್ದ ಕೋತಿಗಳಿಗೆ ನೀಡುತ್ತಿದ್ದರು. ಹೀಗಾಗಿ ಸ್ಥಳದಲ್ಲಿದ್ದ ಕೋತಿಗಳ ಹೊಟ್ಟೆ ತುಂಬುತ್ತಿತ್ತು. ಆದರೆ ಈಗ ಕೆಆರ್ ಮಾರ್ಕೆಟ್ ಬಂದ್ ಆಗಿರುವ ಹಿನ್ನೆಲೆ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವಿನಿಂದ ಮೂಕ ಪ್ರಾಣಿಗಳು ರೋಧಿಸುತ್ತಿದ್ದ ದೃಶ್ಯವನ್ನು ಕಂಡ ಸಬ್ ಇನ್ಸ್‌ಪೆಕ್ಟರ್ ಭಗವಂತ್ ಅವರು ಕೋತಿಗಳಿಗೆ ಹಣ್ಣು ತಿನ್ನಲು ನೀಡಿ ಅವುಗಳ ಹಸಿವು ನೀಗಿಸಿದ್ದಾರೆ.
Advertisement
Advertisement
ಎಸ್‍ಐ ಅವರು ಕೋತಿಗಳಿಗೆ ಕಲ್ಲಂಗಡಿ ಹಣ್ಣನ್ನು ನೀಡಿ ಹಸಿವು ನೀಗಿಸಿದ್ದಾರೆ. ಎಸ್‍ಐ ಅವರು ಕೋತಿಗಳಿಗೆ ಹಣ್ಣು ನೀಡುವಾಗ ಪೊಲೀಸ್ ಸಿಬ್ಬಂದಿಯೊಬ್ಬರು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಕೊಟ್ಟು ಸಹಾಯ ಮಾಡಿದ್ದಾರೆ. ಹಣ್ಣು ನೀಡುತ್ತಿದ್ದಂತೆ ಕೋತಿಗಳು ಬಂದು ಅದನ್ನು ತೆಗೆದುಕೊಂಡು ತಿಂದು ಅವುಗಳ ಹೊಟ್ಟೆ ತುಂಬಿಸಿಕೊಂಡಿವೆ. ಈ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.