ಪೊಲೀಸ್ ಧ್ವಜ ದಿನ: ‘ಲಾಫಿಂಗ್ ಬುದ್ಧ’ ತಂಡದಿಂದ ಗೌರವ

Public TV
1 Min Read
Laughing Buddha 3

ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಲಾಫಿಂಗ್ ಬುದ್ಧ (Laughing Buddha) ಸಿನಿಮಾ ಶೂಟಿಂಗ್ ಕೆಲಸಗಳು ಈಗಾಗಲೇ ಮುಗಿದಿವೆ. ಇದೀಗ ಇದೇ ಚಿತ್ರತಂಡದಿಂದ ಕರ್ನಾಟಕ ಪೊಲೀಸ್ ಇಲಾಖೆಗೆ (Police Flag) ಶುಭಾಶಯಗಳು ರವಾನೆಯಾಗಿವೆ.

Laughing Buddha 2

ಪೊಲೀಸ್ ಧ್ವಜ ದಿನದ ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದೆ. ಧೈರ್ಯದ ಮತ್ತೊಂದು ಹೆಸರು ಮತ್ತು ಪ್ರತೀಕವಾಗಿರುವ ಕೆಚ್ಚೆದೆಯ  ಪೊಲೀಸರಿಗೆ ನಮ್ಮ ಲಾಫಿಂಗ್ ಬುದ್ಧ ಚಿತ್ರತಂಡದಿಂದ ಅಭಿನಂದನೆಗಳು ಎಂದಿದೆ.

Laughing Buddha 1

ರಿಷಬ್ ಶೆಟ್ಟಿ (Rishabh Shetty) ಫಿಲಂಸ್ ಬ್ಯಾನರ್ ನಲ್ಲಿ ಲಾಫಿಂಗ್ ಬುದ್ಧ ಸಿನಿಮಾ ನಿರ್ಮಾಣವಾಗುತ್ತಿದೆ. ಭರತ್ ರಾಜ್ ಎಂ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ತೇಜು ಬೆಳವಾಡಿ, ಸುಂದರ್ ರಾಜ್ ಸೇರಿ ಇನ್ನೂ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ಶೂಟಿಂಗ್ ವಿಚಾರಕ್ಕೆ ಬಂದರೆ, ಭದ್ರಾವತಿ, ಜೋಗ, ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ಶೀಘ್ರದಲ್ಲಿಯೇ ಲಾಫಿಂಗ್ ಬುದ್ಧ ಚಿತ್ರಮಂದಿರಕ್ಕೆ ಬರಲಿದೆ.

Share This Article