ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಚಾಕು ಹಾಕಿದ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ರೌಡಿಗಳು ಚಾಕುವಿನಿಂದ ಹಲ್ಲೆ ನಡೆಸಿದಾಗ ಪೊಲೀಸರು ಶೂಟೌಟ್ ಮಾಡಿದ ಘಟನೆ ನಗರದ ಕೆಎಚ್‍ಬಿ ಕಾಲೋನಿಯಲ್ಲಿ ನಡೆದಿದೆ.
ರೌಡಿಗಳು ಪೊಲೀಸರು ಮೇಲೆ ಹಲ್ಲೆ ಮಾಡುತ್ತಿದ್ದಂತೆ ಆತ್ಮರಕ್ಷಣೆಗೆಗಾಗಿ ಪೊಲೀಸರು ರೌಡಿಗಳ ಮೇಲೆ ಗುಂಡು ಹಾರಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ಪಿಎಸ್‍ಐ ಸಿದ್ದೇಶ್ ಹಾಗೂ ಬಡಾವಣೆ ಠಾಣೆ ಪೇದೆ ಚಂದ್ರು ರೌಡಿಗಳನ್ನು ಬಂಧಿಸಲು ಹೋದ ವೇಳೆ ಸತೀಶ್ ಹಾಗೂ ಸುನೀಲ್, ಎಸ್‍ಐ ಸಿದ್ದೇಶ್, ಪೇದೆ ಚಂದ್ರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಇದರಿಂದಾಗಿ ಸಿದ್ದೇಶ್ ಆತ್ಮರಕ್ಷಣೆಗೆ ಸುನೀಲ್ ಹಾಗೂ ಸತೀಶ್ ಕಾಲಿಗೆ ಗುಂಡು ಹಾರಿಸಿದ್ದು, ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತಿಂಗಳ 16 ರಂದು ರೇವಣಿನಾಯ್ಕ ಎಂಬಾತನ ಮೇಲೆ ಸುನೀಲ್, ಸತೀಶ್ ಹಾಗೂ ಆತನ ಸಹಚರರು ಕ್ಷುಲಕ ಕಾರಣಕ್ಕೆ ಆತನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಎರಡು ದಿನಗಳ ಹಿಂದೆ ಜಾನಿ, ಚೇತು, ಲಿಂಗರಾಜ್, ಅಕ್ಷಯ್ ಎಂಬ ನಾಲ್ಕು ಜನ ಆರೋಪಿಗಳನ್ನು ಬಡಾವಣೆ ಪೊಲೀಸರು ಬಂದಿಸಿದ್ದರು.
ಪ್ರಕರಣ ಪ್ರಮುಖ ಆರೋಪಿಗಳಾದ ಸುನೀಲ್ ಹಾಗೂ ಸತೀಶ್ ನಗರದ ಕೆಎಚ್‍ಬಿ ಕಾಲೋನಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ವಿದ್ಯಾನಗರ ಎಸ್‍ಐ ಸಿದ್ದೇಶ್ ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಅವರು ಚಾಕುವಿಂದ ಹಲ್ಲೆ ಮಾಡಿದ್ದು, ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಾಳುಗಳು ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.