ಆರೋಪಿಯಿಂದ ಮತ್ತೊಬ್ಬ ಆರೋಪಿ ಕಿಡ್ನಾಪ್ – ಪೊಲೀಸರಿಂದ ಫೈರಿಂಗ್

Public TV
1 Min Read
SHOOT

ಬೆಂಗಳೂರು: ಆರೋಪಿಯೇ ಮತ್ತೊಬ್ಬ ಆರೋಪಿಯನ್ನು ಕಿಡ್ನಾಪ್ ಮಾಡಿದ್ದು, ಈಗ ಅಪಹರಣ ಮಾಡಿದ್ದ ಕಿಡ್ನಾಪರ್ ಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಮನ್ಸೂರ್ ಖಾನ್ ಗುಂಡೇಟು ತಿಂದು ಗಾಯಗೊಂಡಿರುವ ಆರೋಪಿ. ಈತ ರಾಕೇಶ್ ಶರ್ಮಾನನ್ನು ಅಪಹರಣ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಆದರೆ ಉಪ್ಪಾರಪೇಟೆ ಪೊಲೀಸರು ಬಂಧಿಸುವ ವೇಳೆ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.

ರಾಕೇಶ್ ಶರ್ಮಾ ಮತ್ತು ಮನ್ಸೂರ್ ಖಾನ್ ಇಬ್ಬರು ಜೈಲಿನಲ್ಲಿ ಪರಿಚಯ ಆಗಿದ್ದರು. ಆ ಸಂದರ್ಭದಲ್ಲಿ ರಾಕೇಶ್ ನನ್ನ ಬಳಿ ಹಣವಿದೆ ಎಂದು ಹೇಳಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಜೈಲಿನಿಂದ ಬಂದ ಮೇಲೆ ಹಣಕ್ಕಾಗಿ ರಾಕೇಶ್ ಶರ್ಮಾನನ್ನು ಕಿಡ್ನಾಪ್ ಮಾಡಿದ್ದನು. ಜೊತೆಗೆ ಐದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು.

vlcsnap 2019 04 29 08h14m21s239

ಈ ಕುರಿತು ತನಿಖೆ ಮಾಡುವಾಗ ಮನ್ಸೂರ್ ಇರುವಿಕೆಯ ಬಗ್ಗೆ ತಿಳಿದು ಬಂಧಿಸಲು ಹೋಗಿದ್ದಾರೆ. ಬಂಧನದ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆಗ ಆರೋಪಿಗೆ ಉಪ್ಪಾರಪೇಟೆ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತಶದಾರ್ ಫೈರಿಂಗ್ ಮಾಡಿದ್ದಾರೆ.

ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮನ್ಸೂರ್ ಖಾನ್ ವಿರುದ್ಧ ಕೊಲೆ ಯತ್ನ, ರಾಬರಿ, ಅಪಹರಣ ಪ್ರಕರಣ ಸೇರಿದಂತೆ ಒಟ್ಟು ಏಳಕ್ಕೂ ಹೆಚ್ಚು ಕೇಸ್‍ಗಳಿವೆ. ಇತ್ತೀಚೆಗಷ್ಟೆ ಜೈಲಿನಿಂದ ಮನ್ಸೂರ್ ಖಾನ್ ಹೊರಗೆ ಬಂದಿದ್ದನು. ಸದ್ಯಕ್ಕೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *