ಅಟ್ಟಾಡಿಸಿ ಯುವಕನ ಬರ್ಬರ ಕೊಲೆ – ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್

Public TV
1 Min Read
firing

ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರ ಗುಂಡು ಸದ್ದು ಮಾಡಿದ್ದು, ಕೊಲೆ ಆರೋಪಿಗಳ ಮೇಲೆ ನಗರದ ಕಾಮಾಕ್ಷಿಪಾಳ್ಯ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಪ್ರವೀಣಾ ಅಲಿಯಾಸ್ ಇಟಾಚಿ, ಅಭಿ ಅಲಿಯಾಸ್ ಅಂದ್ರಹಳ್ಳಿ ಅಭಿ ಗುಂಡೇಟು ತಿಂದ ಆರೋಪಿಗಳು. ಇವರು ಶನಿವಾರ ರಾತ್ರಿ ಮಹೇಶ್ ಕುಮಾರ್ ಎಂಬವನನ್ನು ಸುಂಕದಕಟ್ಟೆಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಲೆ ಮಾಡಿದ್ದರು. ಇಂದು ಮುಂಜಾನೆ ಖಚಿತ ಮಾಹಿತಿ ಮೇರೆಗೆ ಸೆರೆಹಿಡಿಯಲು ಪೊಲೀಸರು ಹೋಗಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿಯೇ ಅಟ್ಟಾಡಿಸಿ ಯುವಕನ ಬರ್ಬರ ಕೊಲೆ

kamakshipalya 4

ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆಗ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಹೆಡ್ ಕಾನ್‍ಸ್ಟೇಬಲ್ ವಸಂತ್ ಕುಮಾರ್ ಮತ್ತು ಸತೀಶ್ ಅವರಿಗೆ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆಯಾಗಿರುವ ಮಹೇಶ್ ಈ ಹಿಂದೆ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದನು. 2014ರಲ್ಲಿ ತಾವರೆಕೆಯಲ್ಲಿ ಕೊಲೆಯಾಗಿದ್ದ ಸೂರಿ ಕೊಲೆಯ ಪ್ರತೀಕಾರಕ್ಕೆ ಮಹೇಶನನ್ನ ಕೊಲೆಗೈದಿದ್ದಾರೆ. ಆರೋಪಿಗಳಾದ ಅಭಿ ಹಾಗೂ ಪ್ರವೀಣ ಇಬ್ಬರೂ ಸ್ಲಂ ಭರತನ ಸಹಚರರಾಗಿದ್ದರು.

kamakshipalya 1 2

Share This Article