ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ರಾತ್ರಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಇನ್ಸ್ ಪೆಕ್ಟರ್ ವೀರೂಪಾಕ್ಷ ಸ್ವಾಮಿ, ರೌಡಿಶೀಟರ್ ಅಶೋಕ್ ಅಲಿಯಾಸ್ ಅರ್ಜುನ್ (22) ಕಾಲಿಗೆ ಫೈರ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ರೌಡಿಶೀಟರ್ ಅಶೋಕ್ ರಾಬರಿ ಮಾಡಿ ಪರಾರಿಯಾಗಿದ್ದನು. ಅಶೋಕ್, ಮೆಹರ್ ಅಲಿ ಎಂಬವರ ಮನೆಗೆ ಮನೆಗೆ ನುಗ್ಗಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದನು.
Advertisement
ಪೊಲೀಸರು ಎರಡು ದಿನಗಳಿಂದ ಅಶೋಕ್‍ಗಾಗಿ ಹುಡುಕಾಟ ನಡೆಸುತ್ತಿದ್ದರು. ಬಳಿಕ ಸೋಮವಾರ ರಾತ್ರಿ ಅಶೋಕ್ ಕಸ್ತೂರಿನಗರದಲ್ಲಿ ಇರೋದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು ಮಾಹಿತಿ ಪಡೆದ ಇನ್ಸ್ ಪೆಕ್ಟರ್ ವೀರೂಪಾಕ್ಷ ಸ್ವಾಮಿ ಸ್ಥಳಕ್ಕೆ ಹೋಗಿ ಸರಂಡರ್ ಆಗುವಂತೆ ಸೂಚಿಸಿದ್ದಾರೆ.
Advertisement
Advertisement
ಸರಂಡರ್ ಆಗು ಎಂದು ಪೊಲೀಸರು ಹೇಳಿದ್ದಾರೆ ಅಶೋಕ್ ಡ್ರ್ಯಾಗರ್ ನಿಂದ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಪೊಲೀಸ್ ಪೇದೆ ಸೌದಾಗರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಆರೋಪಿ ಅಶೋಕ್ ಬಲಗಾಲಿಗೆ ಫೈರ್ ಮಾಡಿದ್ದಾರೆ. ಸದ್ಯ ಗಾಯಾಳು ಅಶೋಕ್ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
2016ರಲ್ಲಿ ಅಶೋಕ್ ಪೊಲೀಸರ ಮೇಲೆ ಹಾಕಿ ಸ್ಟಿಕ್‍ನಿಂದ ಹಲ್ಲೆ ಮಾಡಿದ್ದನು. ಈ ಪ್ರಕರಣದಲ್ಲಿ ಅಶೋಕ್ ಜೈಲು ಸೇರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದನು. ಸದ್ಯ ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.