ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ನಟೋರಿಯಸ್ ಮೇಲೆ ಪೊಲೀಸರು ಇಂದು ಫೈರಿಂಗ್ ಮಾಡಿದ್ದಾರೆ.
ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿ ಹೇಮಂತ್ ಸಾಗರ್ ಹಾಗೂ ವಿನೋದ್ ಕುಮಾರ್ ನನ್ನು ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.
Advertisement
Advertisement
ಸೋಮವಾರ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯಲ್ಲಿ ಹೆಬ್ಬಗೋಡಿ ಮೂಲದ ಕೆಂಪೇಗೌಡನ ಓಲಾ ಕಾರು ಕಸಿದು ಸುಟ್ಟು ಕೊಲೆ ಮಾಡಿದ್ದರು. ಪ್ರಕರಣ ಬೆನ್ನತ್ತಿದ ನೆಲಮಂಗಲ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
Advertisement
ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನೆಲಮಂಗಲದ ಗಣೇಶನ ಗುಡಿ ಬಳಿ ಆತ್ಮ ರಕ್ಷಣೆಗೆ ಪೊಲೀಸರು ಆರೋಪಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ನೆಲಮಂಗಲ ಟೌನ್ ಕೈಂ ಪಿಎಸ್‍ಐ ನವೀನ್ ಕುಮಾರ್ ಗೆ ಗಾಯಗಳಾಗಿದ್ದು, ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಖಾಸಗಿ ಆಸ್ಪತ್ರೆಗೆ ಗ್ರಾಮಾಂತರ ಎಎಸ್‍ಪಿ ಸಜೀತ್ ಭೇಟಿ ನೀಡಿದ್ದಾರೆ. ಇಬ್ಬರು ಆರೋಪಿಗಳು ಇನೋವಾ ಕಾರು ಕಳ್ಳತನಕ್ಕೆ ಕೊಲೆ ಮಾಡಿದ್ದರು. ಕೊಲೆಯಾದ ಕೆಂಪೇಗೌಡ ವಿಚಾರದಲ್ಲಿ ಎರಡು ದಿನದ ಹಿಂದೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಶೋಕಿ ಮಾಡಲು ಓಲಾ ಕಂಪನಿ ಮೂಲಕ ಇನೋವಾ ಕಾರು ಬುಕ್ ಮಾಡಿದ್ದರು. ನಂತರ ಮೃತ ಕೆಂಪೇಗೌಡನ ಬಳಿ ಕಾರಿನ ಡಾಕ್ಯುಮೆಂಟ್ ಸಹಿ ಪಡೆದಿದ್ದರು. ಕೆಂಪೇಗೌಡ ಸಾಲಸೊಲ ಮಾಡಿ ಕಾರು ಖರೀದಿಸಿದ್ದನು. ಆರೋಪಿಗಳ ಮೇಲೆ ರಾಮನಗರ, ಮಂಡ್ಯ, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಕೇಸ್ ದಾಖಲಾಗಿದೆ.