ಕಲಬುರಗಿ: ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದ ವಾಡಿ ರಸ್ತೆಯಲ್ಲಿ ನಡೆದಿದೆ.
ಲೈವ್ ಮರ್ಡರ್ ಆರೋಪಿ ಸಂತೋಷ್ ಸ್ವಾಮಿ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಬಂದಿಸಿದ್ದಾರೆ. ಈ ಘಟನೆಯಲ್ಲಿ ಹಾಜಿ ಮಲಂಗ ಮತ್ತು ಪ್ರಮೋದ್ ಎಂಬ ಪೇದೆಗಳಿಗೆ ಗಾಯವಾಗಿದೆ. ಗಾಯಾಳು ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಜನವರಿ 10ರಂದು ಸಂತೋಷ್ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರನ್ನು ಹಾಡಹಗಲೇ ಬಸ್ ಸ್ಟ್ಯಾಂಡ್ ಬಳಿ ಹತ್ಯೆ ಮಾಡಿದ್ದ. ಲಾಡ್ಜ್ ಮ್ಯಾನೇಜರ್ ಹುದ್ದೆಗಾಗಿ ಈ ಕೊಲೆ ನಡೆದಿದ್ದು, ಆರೋಪಿ ಸಂತೋಷ್ ಸಹ ಈ ಹಿಂದೆ ಕಾವೇರಿ ಲಾಡ್ಜ್ ಮ್ಯಾನೇಜರ್ ಆಗಿದ್ದ. ಅವನ ಸ್ಥಳಕ್ಕೆ ಮಲ್ಲಿಕಾರ್ಜುನ ಬಂದ ಹಿನ್ನೆಲೆಯಲ್ಲಿ ಆತನನ್ನು ಹಾಡಹಾಗಲೇ ಕೊಲೆ ಮಾಡಿದ್ದನು.
ಮ್ಯಾನೇಜರ್ ಹತ್ಯೆ ಮಾಡಿ ಪರಾರಿಯಾಗಿದ್ದ ಸಂತೋಷ್‍ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಆರ್‍ಜೆ ನಗರ ಠಾಣೆ ಪಿಎಸ್‍ಐ ಮಹಾಂತೇಶ್ ಆರೋಪಿ ಸಂತೋಷ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv