ಬೆಂಗಳೂರು: ನಗರದ ವಿದ್ಯಾರಣ್ಯಪುರದ ರೈನ್ ಬೋ ಲೇಔಟ್‍ನಲ್ಲಿ ರೌಡಿ ಶೀಟರ್ ನಕುಲ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ನಕುಲ್‍ನನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ. ಆಗ ಆತ್ಮರಕ್ಷಣೆಗೆ ಎಸ್‍ಐ ಪುನೀತ್ ನಕುಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿ ನಕುಲ್ 2016ರ ಫೆಬ್ರವರಿಯಲ್ಲಿ ನಡೆದಿದ್ದ ಗ್ರಾಮಪಂಚಾಯ್ತಿ ಸದಸ್ಯೆ ಗಂಡನ ಕೊಲೆಯ ಪ್ರಮುಖ ಆರೋಪಿ ಆಗಿದ್ದಾನೆ. ಶುಕ್ರವಾರದಂದು ಜೋಸೆಫ್ ಎಂಬಾತನನ್ನು ಹತ್ಯೆ ಮಾಡಲು ಯತ್ನಿಸಿ, ಸಂಜೆ 6 ಗಂಟೆ ಸಮಯದಲ್ಲಿ ಜೋಸೆಫ್ ಮನೆಗೆ ನುಗ್ಗಿ ಗಲಾಟೆ ಕೂಡ ಮಾಡಿದ್ದ.
ದೂರಿನ ಮೇರೆಗೆ ನಕುಲ್‍ನನ್ನ ಬಂಧಿಸಲು ಹೋದಾಗ ಪೇದೆ ಸಿದ್ದು ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ನಕುಲ್ ಕಾಲಿಗೆ ಗುಂಡು ಹಾರಿಸಿ ಆತನನ್ನ ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಆರೋಪಿ ನಕುಲ್ ಹಾಗು ಪೇದೆ ಸಿದ್ದು ಅವ್ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.