ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಬಿಜೆಪಿ ಅಭ್ಯರ್ಥಿ ಹೇಮಲತಾಗೆ ವಿಧಾನಸೌಧದವರೆಗೂ ಇನ್ನೋವಾ ಕಾರಿನಲ್ಲಿ ಬರಲು ಎಸ್ಕಾರ್ಟ್ ವಾಹನ ಸವಲತ್ತು ಕಲ್ಪಿಸಿದ್ದು, ಇದೀಗ ಭಾರೀ ಟೀಕೆಗೆ ಕಾರಣವಾಗಿದೆ.
ಬಿಜೆಪಿ ನಾಯಕರೇ ಜಕ್ಕೂರು ಏರ್‌ಫೋರ್ಸ್‌ನಿಂದ ಎಸ್ಕಾರ್ಟ್ ಕೊಟ್ಟು ಇನ್ನೋವಾ ಕಾರಿನಲ್ಲಿ ವಿಧಾನಸೌಧಕ್ಕೆ ಕರೆಸಿದ್ದಾರೆ. ಸೈರನ್ ಹೊಡೆದುಕೊಂಡು ವೇಗವಾಗಿ ವಿಧಾನಸೌಧಕ್ಕೆ ಬಂದು ಹೇಮಲತಾ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಎಸ್ಕಾರ್ಟ್ ಸೌಲಭ್ಯ ಕಲ್ಪಿಸಿದ ಬಿಜೆಪಿ ನಾಯಕರು ನಾಮಪತ್ರ ಸಲ್ಲಿಕೆಗೆ ವಿಳಂಬವಾಗುತ್ತಿತ್ತು. ಹಾಗಾಗಿ ಎಸ್ಕಾರ್ಟ್ ನೀಡಲಾಯಿತು ಎಂದು ಕಾರಣ ನೀಡಿದ್ದಾರೆ. ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ- ಕೊಪ್ಪಳದ ಬಿಜೆಪಿ ನಾಯಕಿಗೆ ಬಂಪರ್
ಈ ಹಿಂದೆ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಮಾಣ ವಚನಕ್ಕೆ ಸಿಗ್ನಲ್ ಫ್ರೀ ಸೌಕರ್ಯ ಕಲ್ಪಿಸಿಕೊಟ್ಟಿದ್ದ ಬಿಜೆಪಿ, ಇದೀಗ ಎಂಎಲ್‌ಸಿ ಚುನಾವಣೆ ನಾಮಪತ್ರ ಸಲ್ಲಿಸೋದಕ್ಕೇ ಹೇಮಲತಾಗೆ ಎಸ್ಕಾರ್ಟ್ ವ್ಯವಸ್ಥೆ ಮಾಡಿಕೊಟ್ಟಿದೆ ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಪರಿಷತ್ ಪಟ್ಟಿ ಪ್ರಕಟ – ಲಕ್ಷ್ಮಣ ಸವದಿಗೆ ಟಿಕೆಟ್
ಎಸ್ಕಾರ್ಟ್ ಒದಗಿಸಲು ಗೃಹ ಸಚಿವರೇ ಪೊಲೀಸರಿಗೆ ಸೂಚಿಸಿದ್ರಾ? ಯಾರ ಆದೇಶ ಪಾಲನೆ ಮಾಡಿದ್ರು ಪೊಲೀಸರು? ಶಿಸ್ತಿನ ಪಕ್ಷ ಬಿಜೆಪಿಯದ್ದು ಅಧಿಕಾರ ದುರ್ಬಳಕೆ ಅಲ್ಲವಾ ಎಂಬ ಪ್ರಶ್ನೆಗಳನ್ನು ಜನರು ಪ್ರಶ್ನಿಸುತ್ತಿದ್ದಾರೆ.