– ಬಿಲ್ ಕಟ್ಟದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತ
– ಬೆಸ್ಕಾಂ ನೌಕರನಿಗೇ ಪೊಲೀಸ್ ಆವಾಜ್
ಹಾಸನ: ಇನ್ನೊಂದ್ಸಲ ವಿದ್ಯುತ್ ಸಂಪರ್ಕ ಕಟ್ ಮಾಡಲು ಬನ್ನಿ. ನೀವು ಕಂಬದಲ್ಲಿ ನೇತಾಡುತ್ತಿರಬೇಕು ಹಾಗೇ ಮಾಡ್ತೀನಿ ಎಂದು, ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಚೆಸ್ಕಾಂ ನೌಕರನಿಗೆ ಪೊಲೀಸರೊಬ್ಬರು ಆವಾಜ್ ಹಾಕಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ಬಿಲ್ ಸಂಗ್ರಹಿಸಲು ಚೆಸ್ಕಾಂ ಸಿಬ್ಬಂದಿ ಬುಧವಾರ ಬೆಳಗ್ಗೆ ಪೊಲೀಸ್ ಕ್ವಾಟ್ರಸ್‍ಗೆ ತೆರಳಿದ್ದಾರೆ. ಈ ವೇಳೆ ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದಾರೆ. ಇದರಿಂದ ಕೆರಳಿದ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು,”ಇನ್ನೊಂದ್ಸಲ ಕ್ವಾಟ್ರಸ್‍ಗೆ ಲೈನ್ ಕಟ್ ಮಾಡಲು ಬನ್ನಿ ಮಾಡ್ತೀನಿ. ಕಳ್ಳರನ್ನೆಲ್ಲ ಬಿಟ್ಟು ಇಲ್ಲಿ ಬಂದಿದ್ದೀರಾ ಎಂದು ನಡು ಬೀದಿಯಲ್ಲೇ” ಆವಾಜ್ ಹಾಕಿದ್ದಾರೆ.
ಈ ವೇಳೆ ಚೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಇಬ್ಬರು ಸರ್ಕಾರಿ ನೌಕರರ ಮಾತಿನ ಚಕಮಕಿ ವಿಡಿಯೋ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.