Connect with us

ಸಿಎಂ ಮುಂದೆಯೇ ವಿಕಲಚೇತನನ್ನು ಹೊರಹಾಕಿದ ಪೊಲೀಸರು- ಚಿಕ್ಕಮಗಳೂರಲ್ಲಿ ಅಮಾನವೀಯ ಘಟನೆ

ಸಿಎಂ ಮುಂದೆಯೇ ವಿಕಲಚೇತನನ್ನು ಹೊರಹಾಕಿದ ಪೊಲೀಸರು- ಚಿಕ್ಕಮಗಳೂರಲ್ಲಿ ಅಮಾನವೀಯ ಘಟನೆ

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರ ಸಾಧನ ಸಮಾವೇಶದ ವೇಳೆ ತನ್ನ ನೋವು ತೋಡಿಕೊಳ್ಳಲು ಬಂದ ವಿಕಲಚೇತನರೊಬ್ಬರನ್ನು ಪೊಲೀಸರು ಎಳೆದು ಹೊರಹಾಕಿರೋ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಕಡೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಸಾರುತ್ತಿರೋ ಸಾಧನಾ ಸಮಾವೇಶ ನಡೆಯುತ್ತಿತ್ತು. ಈ ವೇಳೆ ವಿಕಲಚೇತನರೊಬ್ಬರು ತಮಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರುವುದರ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗದಿರುವುದರಿಂದ ಮನನೊಂದು ಸಿಎಂ ಅವರಿಗೆ ಕೊಡಲೆಂದು ಮನವಿ ಪತ್ರ ಹಿಡಿದು ಹೋಗುತ್ತಿದ್ದರು. ಇದನ್ನೂ ಓದಿ: ಬಿಎಸ್‍ವೈ ಅವರಲ್ಲಿ ರಕ್ತ ಎಷ್ಟಿದೆ: ಸಿಎಂ ಪ್ರಶ್ನೆ

ಈ ವೇಳೆ ಅಲ್ಲಿದ್ದಂತಹ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಮುಖಂಡರು ಇದ್ದರೂ ವಿಕಲಚೇತನರ ಮನವಿಯೇನೆಂದು ಕೇಳಲಿಲ್ಲ. ಅಲ್ಲದೇ ಅವರತ್ತ ತಮ್ಮ ಗಮನವನ್ನೂ ಹರಿಸಿಲ್ಲ. ಇನ್ನು ಪೊಲೀಸರು ಮಾನವೀಯತೆ ಮರೆತವರಂತೆ ಅವರನ್ನು ಎಳೆದು ಹೊರಹಾಕಿದ್ದಾರೆ.

https://www.youtube.com/watch?v=0xSkqyPkZZU

Advertisement
Advertisement