ಚಿತ್ರದುರ್ಗ: ಪ್ರೀತಿಸಿದ ಯುವತಿಗೆ ವಂಚಿಸಿ ಮತ್ತೊಬ್ಬಳ ಜೊತೆ ಮದುವೆಗೆ ಮುಂದಾದ ಆರೋಪದ ಮೇಲೆ ವರನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
Advertisement
ಇಲ್ಲಿನ ಈರಜ್ಜನಹಟ್ಟಿಯಲ್ಲಿ ನಡೆಯಬೇಕಿದ್ದ ಮದುವೆಗೆ ಬ್ರೇಕ್ ಬಿದ್ದಿದೆ. ಜೋಡಿ ಚಿಕ್ಕೇನಹಳ್ಳಿಯ ವರ ಮಧುಗೆ ಮದುವೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ವಿವಾಹ ಮುಹೂರ್ತ ನಿಗದಿಯಾಗಿತ್ತು. ಆದ್ರೆ ಮಧು ತನಗೆ ವಂಚಿಸಿದ್ದಾನೆಂದು ಆಂಧ್ರ ಮೂಲದ ಯುವತಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮದುವೆ ನಿಂತಿದ್ದು, ಆರೋಪಿ ಮಧು ಸದ್ಯ ಮಹಿಳಾ ಠಾಣೆಯ ಪೊಲೀಸರ ವಶದಲ್ಲಿದ್ದಾನೆ.
Advertisement
Advertisement
ಪ್ರೀತಿಸಿದ ಯುವತಿ ಜೊತೆ ಮದುವೆಗೆ ಮಧು ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಬೇರೆ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದ ಎಂದು ಆಂಧ್ರ ಮೂಲದ ಯುವತಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾದ ಯುವತಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.