– ಲೈಕ್ಸ್, ವೀವ್ಸ್‌ಗಾಗಿ ಹುಚ್ಚಾಟ, ಮ್ಯಾಚ್ ನೋಡೋ ಭಾಗ್ಯ ಕಳಕೊಂಡ ಯುವಕ
ಬೆಂಗಳೂರು: ಶನಿವಾರ ಬೆಂಗಳೂರಿನ(Bengaluru) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(Chinnaswamy Stadium) ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯಲಿದ್ದು, ಇಲ್ಲೊಬ್ಬ ಯುವಕ ಮ್ಯಾಚ್ ವೇಳೆ ಸ್ಟೇಡಿಯಂ ನುಗ್ತೀನಿ ಎಂದು ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾಗಿದ್ದಾನೆ.
ಇಂದು ಬೆಂಗಳೂರಿನಲ್ಲಿ ನಡೆಯುವ ಆರ್‌ಸಿಬಿ ವರ್ಸಸ್ ಕೆಕೆಆರ್ ಪಂದ್ಯದಲ್ಲಿ ಗ್ರೌಂಡ್‌ಗೆ ನುಗ್ತೀನಿ ಎಂದು ಕಬ್ಜ ಶರಣ್ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಶರಣ್ ವೀಡಿಯೋ ಪೋಸ್ಟ್ ಹಾಕಿದ್ದ. ಅಲ್ಲದೇ ಗ್ರೌಂಡ್ ಒಳಗೆ ಹೋಗಿ ವಿರಾಟ್ ಕೊಹ್ಲಿನ(Virat Kohli) ಹಗ್ ಮಾಡ್ತೀನಿ ಅಂತಾನೂ ಚಾಲೆಂಜ್ ಹಾಕಿದ್ದ. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅನುಮಾನ ಸೇನೆ ಬಗ್ಗೆ ಅಲ್ಲ, ಬಿಜೆಪಿ ನಾಯಕರ ಬಗ್ಗೆ: ರಾಮಲಿಂಗಾ ರೆಡ್ಡಿ
ಶರಣ್ ವಿಡಿಯೋ ವೈರಲ್ ಆಗ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸರು(Cubbon Park Police) ಠಾಣೆಗೆ ಕರೆಸಿ ವೀಡಿಯೋ ಡಿಲೀಟ್ ಮಾಡಿಸಿದ್ದರು. ಇಂದು ಮ್ಯಾಚ್ ಇರೋ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಶರಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಾಕ್ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ
ಇನ್ಸ್ಟಾಗ್ರಾಂ ಲೈಕ್ಸ್ ಹಾಗೂ ವೀವ್ಸ್‌ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರ ತಕ್ಕ ಪಾಠ ಕಲಿಸಿದ್ದು, ಸ್ಟೇಡಿಯಂ ನುಗ್ತೀನಿ ಅಂದವನಿಗೆ ಮ್ಯಾಚ್ ನೋಡೋ ಭಾಗ್ಯವೂ ಇಲ್ಲವಾಗಿದೆ. ಇದೀಗ ತಪ್ಪಾಯ್ತು ಎಂದು ವೀಡಿಯೋ ಮಾಡಿರುವ ಶರಣ್, ಇವತ್ತು ಮ್ಯಾಚ್ ಮುಗಿಯುವರೆಗೆ ಠಾಣೆಯಲ್ಲಿ ಇರ್ತಿನಿ ಅಂತಾ ಸ್ಟೋರಿ ಹಾಕಿದ್ದಾನೆ. ಇದನ್ನೂ ಓದಿ: ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು
ಇನ್ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್‌ಗಾಗಿ ಹುಚ್ಚಾಟದ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದ ಯುವಕ, ಇಂದು ನಡೆಯುವ ಆರ್‌ಸಿಬಿ(RCB) ಪಂದ್ಯ ನೋಡಲಾಗದೇ ಪರಿತಪಿಸುತ್ತಿದ್ದಾನೆ.