ಮಂಗಳೂರು: ನೋಟ್ ಬ್ಯಾನ್, ಕ್ಯಾಶ್ ಬ್ಯಾನ್ ಅಂತ ಕೇಂದ್ರ ಸರ್ಕಾರ ಏನೆಲ್ಲಾ ಕಸರತ್ತು ನಡೆಸಿದ್ರೂ ಹವಾಲಾ ದಂಧೆಗೆ ಬ್ರೇಕ್ ಬಿದ್ದಿಲ್ಲ. ರಾಬರಿ ಪ್ರಕರಣವನ್ನು ಬೆನ್ನತ್ತಿ ಹೋದ ಮಂಗಳೂರು ಪೊಲೀಸರು ದೊಡ್ಡ ಜಾಲವೊಂದನ್ನೇ ಬೇಧಿಸಿದ್ದಾರೆ.
ಅಕ್ಟೋಬರ್ 26ರಂದು ಮಂಗಳೂರಿನ ರಥಬೀದಿಯಲ್ಲಿರುವ ವೈಷ್ಣವಿ ಜ್ಯುವೆಲ್ಲರಿ ಸಿಬ್ಬಂದಿ ಮಂಜುನಾಥ್, ಖದೀಮರು ತಮ್ಮನ್ನು ಕಿಡ್ನಾಪ್ ಮಾಡಿ 15 ಲಕ್ಷ ರೂಪಾಯಿ ದೋಚಿದ್ದಾರೆ ಅಂತ ದೂರು ನೀಡಿದ್ರು. ಪ್ರಕರಣ ಬೆನ್ನತ್ತಿದ್ದ ವಿಶೇಷ ತಂಡದ ಪೊಲೀಸರು ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಮನ್ನಾನ್ ಮತ್ತು ಮಂಗಳೂರಿನ ಪಡೀಲ್ ನಿವಾಸಿ ರಾಜಿಂ ಎಂಬ ಇಬ್ಬರನ್ನು ಬಂಧಿಸಿ ಅವರ ಬಳಿ ಇದ್ದ ಬರೋಬ್ಬರಿ 1.75 ಕೋಟಿ ನಗದನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ತಿಳಿಸಿದ್ದಾರೆ.
Advertisement
Advertisement
ಅಕ್ಟೋಬರ್ 23 ರಂದು ಮಧ್ಯಾಹ್ನ ಕಿಡ್ನಾಪ್ ಪ್ರಕರಣ ನಡೆದಿದ್ರೂ ಜ್ಯುವೆಲ್ಲರಿ ಮಾಲೀಕ ಸಂತೋಷ್ ಸೂಚನೆಯಂತೆ 2 ದಿನಗಳ ನಂತರ ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದರು. ದೂರು ಕೊಟ್ಟಿದ್ದು 15 ಲಕ್ಷ ಅಂತ ಆದ್ರೆ ಆರೋಪಿಗಳ ಬಳಿ ಸಿಕ್ಕಿದ್ದು 1.75 ಕೋಟಿ ರೂಪಾಯಿ. ಪೊಲೀಸರ ಪ್ರಕಾರ ಬ್ಯಾಗ್‍ನಲ್ಲಿ 2.35 ಕೋಟಿ ರೂ. ಇತ್ತು. ನಾಲ್ವರು ಆರೋಪಿಗಳು ಉಳಿದ 60 ಲಕ್ಷ ರೂಪಾಯಿ ಜೊತೆಗೆ ನಾಪತ್ತೆಯಾಗಿದ್ದಾರೆ. ಹೀಗಾಗಿ ದೂರು ನೀಡಿದ್ದ ಮಂಜುನಾಥ್ ಹಾಗೂ ಜ್ಯುವೆಲ್ಲರಿ ಮಾಲೀಕರನ್ನೂ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಲೆಕ್ಕ ರಹಿತ ನಗದು ಪತ್ತೆಯಾಗಿರುವ ಕಾರಣ ಪ್ರಕರಣದ ಬಗ್ಗೆ ಐಟಿ ಇಲಾಖೆಗೂ ಮಾಹಿತಿ ನೀಡಿದ್ದಾರೆ ಅಂತ ಅವರು ಹೇಳಿದ್ರು.
Advertisement
Advertisement
ಮಂಗಳೂರು ಹಾಗೂ ಮುಂಬೈನಲ್ಲಿ ಜ್ಯುವೆಲ್ಲರಿ ಮಳಿಗೆ ಹೊಂದಿರುವ ವೈಷ್ಣವಿ ಮಾಲೀಕರು ದೂರು ಕೊಟ್ಟು ಸಿಕ್ಕಿಬಿದ್ದಂತಾಗಿದೆ. ಕೋಟ್ಯಂತರ ರೂಪಾಯಿ ಚಲಾವಣೆಯಾಗಿರೋದು ಅಚ್ಚರಿಗೆ ಕಾರಣವಾಗಿದೆ. ಮುಂಬೈ ಟು ಮಂಗಳೂರು ಹವಾಲ ದಂಧೆ ನಡೀತಿದ್ಯಾ ಅನ್ನೋ ಅನುಮಾನ ಪೊಲೀಸರಿಗೆ ಮೂಡಿದ್ದು ಪ್ರಕರಣ ಭಾರೀ ಕುತೂಹಲ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews