ಪ್ರವಾಸಿಗರಿಗೆ ಕಿರುಕುಳ ಕೊಟ್ಟ ಕಿಡಿಗೇಡಿ ಈಗ ಪೊಲೀಸರ ವಶಕ್ಕೆ!

Public TV
0 Min Read
HSN GOOSA COLLAGE

ಹಾಸನ: ಪ್ರವಾಸಿಗರಿಗೆ ಕಿರುಕುಳ ಕೊಟ್ಟ ಕಿಡಿಗೇಡಿಯೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಶನಿವಾರ ರಾತ್ರಿ ನಗರದ ಬಿಎಂ ರಸ್ತೆಯ ಬಳಿ ಈ ಘಟನೆ ನಡದಿದ್ದು, ತಮಿಳುನಾಡು ಮೂಲದ ಪ್ರವಾಸಿಗರು ಕೆಲವರು ಊಟಕ್ಕಾಗಿ ತಮ್ಮ ವಾಹನ ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಈ ಕಿಡಿಗೇಡಿ ಪ್ರವಾಸಿಗರೊಬ್ಬರಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ದೈಹಿಕ ಹಲ್ಲೆಗೂ ಮುಂದಾಗಿದ್ದಾನೆ.

ಕೂಡಲೇ ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಪೊಲೀಸರು ಕಿಡಿಗೇಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆತನನ್ನು ಬಿಟ್ಟು ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *