ರಕ್ಷಿತ್ ಶೆಟ್ಟಿ ನಟಿಸಿರು ಚಾರ್ಲಿ 777 ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈ ಸಿನಿಮಾದ ಕೊನೆಯಲ್ಲಿ ನಾಯಿಯನ್ನು ದತ್ತು ಪಡೆದುಕೊಳ್ಳಿ ಎಂದು ಸಂದೇಶವಿದೆಯಂತೆ. ಹಾಗಾಗಿಯೇ ಸಿನಿಮಾ ನೋಡಿದ ಅನೇಕರು ತಮ್ಮ ತಮ್ಮ ಶ್ವಾನ ಪ್ರೀತಿ ತೋರುತ್ತಿದ್ದಾರೆ. ಕೇವಲ ಸಾಮಾನ್ಯ ಸಿನಿಮಾ ನೋಡುಗರು ಮಾತ್ರವಲ್ಲ, ಪೊಲೀಸ್ ಇಲಾಖೆ ಕೂಡ ತಮ್ಮ ಶ್ವಾನ ದಳದ ನಾಯಿಗೆ ವಿಭಿನ್ನ ರೀತಿಯಲ್ಲಿ ಗೌರವ ನೀಡುವ ಮೂಲಕ ಸಿನಿಮಾವನ್ನು ನೆನಪಿಸಿಕೊಂಡಿದೆ.
Advertisement
ಚಾರ್ಲಿ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯ ಸಂಬಂಧದ ಕುರಿತು ಅನೇಕ ಅಂಶಗಳನ್ನು ಅಳವಡಿಸಲಾಗಿದೆಯಂತೆ. ಹಾಗಾಗಿ ಮಂಗಳೂರು ಪೊಲೀಸ್ ಇಲಾಖೆಯು ಅದರಿಂದ ಸ್ಫೂರ್ತಿ ಪಡೆದುಕೊಂಡು ತಮ್ಮ ಶ್ವಾನ ದಳದ ಮರಿನಾಯಿಗೆ ಚಾರ್ಲಿ ಎಂದು ಹೆಸರಿಟ್ಟಿದ್ದಾರೆ. ನಾಯಿಮರಿಗೆ ಇನ್ನೂ ಮೂರು ತಿಂಗಳಾಗಿದ್ದರಿಂದ ಚಾರ್ಲಿ ಎಂದು ಹೆಸರಿಡುವ ಮೂಲಕ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣ ಚಾರ್ಲಿ ಸಿನಿಮಾ ಎಂದು ಹೇಳಿದ್ದಾರೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ
Advertisement
Advertisement
ಪೊಲೀಸ್ ಸಿಬ್ಬಂದಿ ಕಚೇರಿಯಲ್ಲೇ ಕೇಕ್ ತಂದು, ನಾಯಿಗೆ ಹೆಸರಿಟ್ಟು ಜೂನ್.9ರಂದು ನಾಮಕರಣ ಶಾಸ್ತ್ರ ಮುಗಿಸಿದ್ದಾರೆ. ಈ ನಾಯಿಮರಿಯು ಲ್ಯಾಬ್ರಡರ್ ತಳಿಯಾಗಿದ್ದು, ಬಂಟ್ವಾಳದಿಂದ ಇಪ್ಪತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಲಾಗಿದೆಯಂತೆ. ಅಂದಹಾಗೆ ಈ ನಾಯಿ ಮರಿ ಹುಟ್ಟಿದ್ದು 16 ಮಾರ್ಚ್ 2022ರಂದು, ಮೂರ್ನಾಲ್ಕು ತಿಂಗಳ ಬಳಿಕೆ ಈ ನಾಯಿಮರಿ ಬೆಂಗಳೂರಿನಲ್ಲಿ ತರಬೇತಿಗಾಗಿ ಬರಲಿದೆಯಂತೆ. ಆನಂತರವಷ್ಟೇ ಅದನ್ನು ಬಾಂಬ್ ನಿಷ್ಕ್ರೀಯ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆಯಂತೆ.