ಮಂಗಳೂರು: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಫೀಲ್ಡ್ ನಲ್ಲಿರುವ ಪತ್ರಕರ್ತರಿಗೆ ಸೋಂಕು ತಗುಲುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೋಲಿಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರು ಪತ್ರಕರ್ತರ ಕಾಳಜಿ ಬಗ್ಗೆ ಗಮನ ಹರಿಸಿದ್ದಾರೆ.
Advertisement
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಗಾಗಿ ಫೇಸ್‍ಶೀಲ್ಡ್ ಅನ್ನು ವಿತರಿಸಿದ್ದಾರೆ. ಲಾಕ್‍ಡೌನ್ ನಡುವೆಯೂ ಪೊಲೀಸರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಸಾಮಾಜಿಕ ಕಾರ್ಯಕರ್ತರು ಜನರ ನಡುವೆ ಇರುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಫೇಸ್‍ಶೀಲ್ಡ್ ಬಳಕೆ ಸೂಕ್ತ ಎಂಬುದು ಕಮಿಷನರ್ ಹರ್ಷಾ ಅವರ ಅಭಿಪ್ರಾಯವಾಗಿದೆ.
Advertisement
Advertisement
ಹೀಗಾಗಿ ನಗರದ ಉರ್ವಾ ಸ್ಟೇಷನ್‍ನಲ್ಲಿ ಈ ಫೇಸ್‍ಶೀಲ್ಡ್ ಗಳನ್ನು ಪತ್ರಕರ್ತರಿಗೆ ವಿತರಿಸುವ ಕಾರ್ಯ ನಡೆಯಿತು. ಉರ್ವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶರೀಫ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪತ್ರಕರ್ತರಿಗೂ ಫೇಸ್‍ಶೀಲ್ಡ್ ಗಳನ್ನು ಆಯುಕ್ತರ ಪರವಾಗಿ ವಿತರಿಸಿದರು.