ಬೆಂಗಳೂರು: ಡೊಳ್ಳು ಹೊಟ್ಟೆ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಮಹಿಳಾ ಪೊಲೀಸರ ಯೂನಿಫಾರ್ಮ್ ನಲ್ಲಿ ಬದಲಾವಣೆ ತರಲು ಇಲಾಖೆ ನಿರ್ಧರಿಸಿದೆ.
ಖಾಕಿ ಸೀರೆ, ಖಾಕಿ ಸಲ್ವಾರ್ ಸೇರಿದಂತೆ ವೆರೈಟಿ ಯೂನಿಫಾರ್ಮ್ ಗೆ ಬ್ರೇಕ್ ಹಾಕಿ, ಪುರಷ ಪೊಲೀಸರ ರೀತಿಯಲ್ಲೆ ಒಂದೇ ಯೂನಿಫಾರ್ಮ್ ಧರಿಸಬೇಕು. ಕೆಎಸ್‍ಆರ್ ಪಿ ಮಹಿಳಾ ಪೊಲೀಸರು ನಾಲ್ಕು ರೀತಿಯ ಯೂನಿಫಾರ್ಮ್ ಧರಿಸುತ್ತಿದ್ದಾರೆ.
Advertisement
Advertisement
ಮಹಿಳಾ ಪೊಲೀಸ್ ಪೇದೆಗಳಿಗೂ ಫಿಟ್ನೆಸ್ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಅಂತ ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
Advertisement
ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರವಾಗುತ್ತಿದೆ. ಹೀಗಾಗಿ ಡೊಳ್ಳು ಹೊಟ್ಟೆ ಇರುವ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಕಮಾಂಡೇಟ್ ಗಳದ್ದಾಗಿದೆ. ರಾಜ್ಯದಲ್ಲಿ ಕೆಎಸ್‍ಆರ್ ಪಿ 12 ಪಡೆಗಳಿವೆ. ಈ 12 ಪಡೆಗಳಲ್ಲಿರುವ ಡೊಳ್ಳು ಹೊಟ್ಟೆ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾ ಕಾಮಾಂಡೇಟ್‍ಗಳದ್ದು ಎಂದು ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಸುತ್ತೊಲೆ ಹೊರಡಿಸಿದ್ದಾರೆ. ಜುಲೈ 3ರಂದು ಭಾಸ್ಕರ್ ರಾವ್ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.