ಬೆಂಗಳೂರು: ಪೊಲೀಸರ ಕೈಯಿಂದ ಇನ್ನು ಮುಂದೆ ಕ್ರಿಮಿನಲ್‍ಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಕ್ರಿಮಿನಲ್‍ಗಳನ್ನು ಮಟ್ಟಹಾಕಲು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಕ್ರಿಮಿನಲ್‍ಗಳನ್ನು ಮಟ್ಟಹಾಕಲು ಅವರನ್ನು ಖೆಡ್ಡಾಕೆ ಬೀಳಿಸಲು `ಫೇಷಿಯಲ್ ರೆಕಗ್ನೇಷನ್ ಸಿಸ್ಟಮ್’ ಪರಿಚಯಿಸಿದ್ದು, ಪ್ರಾಯೋಗಿಕವಾಗಿ ನಗರದ 7 ಕಡೆ ಜಾರಿ ಮಾಡಿದ್ದಾರೆ. ಯಶವಂತಪುರ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್, ಒರಿಯಾನ್ ಮಾಲ್, ಮಂತ್ರಿಮಾಲ್, ಬನಶಂಕರಿ ಬಸ್ ಸ್ಟಾಪ್‍ಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ.
Advertisement
Advertisement
ಅಪರಾಧವೆಸಗಿ ತಪ್ಪಿಸಿಕೊಂಡು ಓಡಾಡುವ ಕ್ರಿಮಿನಲ್‍ಗಳ ಚಹರೆಯನ್ನ ಕ್ಯಾಪ್ಚರ್ ಮಾಡುವ ಈ ಕ್ಯಾಮೆರಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುತ್ತದೆ. 10 ವರ್ಷ ಹಳೆಯ ಪ್ರಕರಣದ ಆರೋಪಿಗಳನ್ನು ಈ ಕ್ಯಾಮೆರಾ ಕಂಡುಹಿಡಿಯುತ್ತದೆ.
Advertisement
`ಫೇಷಿಯಲ್ ರೆಕಗ್ನೇಷನ್ ಸಿಸ್ಟಮ್’ ಅಂತ ನಗರದಲ್ಲಿ 7 ಕ್ಯಾಮೆರಾವನ್ನು ಅಳವಡಿಸಿದ್ದೇವೆ. ತಪ್ಪಿಸಿಕೊಂಡು ಓಡಾಡುವ ಕ್ರಿಮಿನಲ್‍ಗಳ ಚಹರೆಯನ್ನ ಕ್ಯಾಪ್ಚರ್ ಮಾಡಿ ನಮಗೆ ಅದು ಎಚ್ಚರಿಕೆ ಕೊಡುತ್ತದೆ. ಬಳಿಕ ನಾವು ಆತನನ್ನು ಬಂಧಿಸುತ್ತೇವೆ. ಆದ್ದರಿಂದ ಈ ವ್ಯವಸ್ಥೆಯನ್ನು ಪ್ರಯೋಗಿಕವಾಗಿ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಅವರು ಹೇಳಿದ್ದಾರೆ.
Advertisement
ಈ `ಫೇಷಿಯಲ್ ರೆಕಗ್ನೇಷನ್ ಸಿಸ್ಟಮ್’ ಯುಕೆ ಮತ್ತು ಯುಎಸ್‍ಎನಲ್ಲಿ ಇದ್ದು, ಆ ಮಾದರಿಯಂತೆ ಅಳವಡಿಸಲು ನಗರದ ಪೊಲೀಸರು ಮುಂದಾಗಿದ್ದಾರೆ. ಈ ಕ್ಯಾಮೆರಾ ಪೊಲೀಸರ ಬಳಿ ಇರುವ ಅಪರಾದಿಗಳ ಡಾಟ ಕಲೆಕ್ಟ್ ಮಾಡಿ ಆರೋಪಿಯ ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನೆ ಮಾಡುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv