ಬೆಂಗಳೂರು: ಇನ್ಸ್‌ಪೆಕ್ಟರ್ ದಂಪತಿ ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಭಾರೀ ಹೈಡ್ರಾಮಾ ಸೃಷ್ಟಿಸಿರುವ ಘಟನೆ ನಗರದ ಚಾಮರಾಜಪೇಟೆ ಠಾಣೆ ಎದುರು ನಡೆದಿದೆ.
Advertisement
ಸಿಎಆರ್ ಇನ್ಸ್‌ಪೆಕ್ಟರ್ ಸಂಜೀವ್ ಮತ್ತು ಪತ್ನಿ ಉಷಾ ಕುಡಿದ ಮತ್ತಿನಲ್ಲಿ ತಡರಾತ್ರಿ ಜಾಲಿ ರೈಡ್‍ಗೆ ಬಂದಿದ್ದರು. ಈ ವೇಳೆ ಕಾರು ಚಲಾಯಿಸಿ ಉಷಾ ಅಪಘಾತ ಮಾಡಿದ್ದಾರೆ. ಚಾಮರಾಜಪೇಟೆಯ 6ನೇ ಮುಖ್ಯರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಕಿರಿಕ್ ಮಾಡಿದ್ದಾರೆ. ಅಲ್ಲದೇ ಗಲಾಟೆ ಮಾಡಿದ್ದ ದಂಪತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಚಾಮರಾಜಪೇಟೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಪೊಲೀಸರಿಗೆ ಕುಡುಕನ ಅವಾಜ್
Advertisement
Advertisement
ಬಳಿಕ ತಪಾಸಣೆ ನಡೆಸಿದ ಪೊಲೀಸರಿಗೆ ಇಬ್ಬರೂ ಕುಡಿದಿರುವುದು ಪತ್ತೆ ಆಗಿದೆ. ಇನ್ಸ್‌ಪೆಕ್ಟರ್ ಸಂಜೀವ್, ಉಷಾ ಮದ್ಯಸೇವನೆ ದೃಢ ಹಿನ್ನೆಲೆ ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಇಂಧನ ಸೋರಿಕೆ – ಆರ್ಟೆಮಿಸ್ ಮೂನ್ ಮಿಷನ್ ರಾಕೆಟ್ ಲಾಂಚಿಂಗ್ ಮತ್ತೆ ಸ್ಥಗಿತ
Advertisement
ಇದೇ ರೀತಿ ಶುಕ್ರವಾರ ತಡರಾತ್ರಿ ಹಲಸೂರ್ ಪೊಲೀಸ್ ಠಾಣೆ ಮುಂದೆ ಟ್ರಾಫಿಕ್ ಸಿಬ್ಬಂದಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕುಡಿದು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಗೆ ಟ್ರಾಫಿಕ್ ಸಿಬ್ಬಂದಿ ಗಾಡಿ ಸೈಡಿಗೆ ಹಾಕುವಂತೆ ಹೇಳಿದ್ದಾರೆ. ಅಷ್ಟಕ್ಕೇ ಆತ ಟ್ರಾಫಿಕ್ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿ ಅವಾಚ್ಯವಾಗಿ ನಿಂದಿಸಿದ್ದನು. ಬಳಿಕ ಆತನಿಂದ ದಂಡ ಕಟ್ಟಿಸಿಕೊಂಡು ಪೊಲೀಸರು ಬಿಟ್ಟು ಕಳಿಸಿದ್ದರು.