ಚಂಡೀಗಢ: ಪಂಜಾಬ್‍ನ ಹೋಶಿಯಾರ್‍ಪುರದಲ್ಲಿ ಪಂಜಾಬ್ ರಾಜ್ಯ ಲೋಹ್ರಿ ಬಂಪರ್ ಲಾಟರಿ ಮೂಲಕ ಪೊಲೀಸ್ ಪೇದೆಯೊಬ್ಬರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಬಹುಮಾನ ಬಂದಿದೆ.
ಅಶೋಕ್ ಕುಮಾರ್ ಬಹುಮಾನ ಗೆದ್ದ ಪೊಲೀಸ್ ಪೇದೆ. ಇವರು ಹೋಶಿಯಾರ್‍ಪುರದ ಸದರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಮ್ಮೆ ಲಾಟರಿ ಟಿಕೆಟ್ ಮಾರಾಟ ಮಾಡಲು ಪೊಲೀಸ್ ಠಾಣೆಗೆ ಏಜೆಂಟ್ ಬಂದಿದ್ದರು. ಆಗ ಅಶೋಕ್ ಕುಮಾರ್ ಲಾಟರಿ ಟಿಕೆಟ್ ಖರೀದಿಸಿದ್ದರು.
Advertisement
Advertisement
“ಬುಧವಾರ ಸಂಜೆ ನನ್ನ ಮೊಬೈಲ್‍ಗೆ ಒಂದು ಮೆಸೇಜ್ ಬಂತು. ಅದು ಲಾಟರಿ ಟಿಕೆಟ್ ಕಡೆಯಿಂದ ಬಂದಿತ್ತು. ಆಗ ನಾನು ಮನೆಯಲ್ಲಿದ್ದೆ. ಆದರೆ ಲಾಟರಿ ಟಿಕೆಟ್ ಅನ್ನು ಠಾಣೆಯಲ್ಲಿ ಇಟ್ಟಿದ್ದೆ. ತಕ್ಷಣ ಓಡಿ ಹೋಗಿ ಲಾಟರಿ ಟಿಕೆಟ್ ತಂದು ನೋಡಿದಾಗ, ಬಹುಮಾನ ಬಂದ ಲಾಟರಿ ನಂಬರ್ ಮತ್ತು ನಾನು ಖರೀದಿ ಮಾಡಿದ್ದ ಲಾಟರಿ ನಂಬರ್ ಒಂದೇ ಆಗಿತ್ತು. ತಕ್ಷಣವೇ ನನಗೆ ಒಂದು ಫೋನ್ ಬಂದಿತ್ತು. ಅವರು ನೀವು ಲಾಟರಿಯಲ್ಲಿ ಎರಡು ಕೋಟಿ ರೂ. ಬಹುಮಾನ ಗೆದ್ದಿದ್ದೀರಿ ಎಂದು ಹೇಳಿದರು. ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಆದರೆ ತುಂಬಾ ಖುಷಿಯಾಯಿತು” ಎಂದು ಪೇದೆ ಅಶೋಕ್ ಕುಮಾರ್
Advertisement
Advertisement
ಪೇದೆ ಅಶೋಕ್ ಹೋಶಿಯಾರ್‍ಪುರ ಜಿಲ್ಲೆಯ ಮೌಟಿಯಾನ್ ಗ್ರಾಮದ ನಿವಾಸಿಯಾಗಿದ್ದು, ಒಂಬತ್ತು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೆ ನಮ್ಮ ಗ್ರಾಮದಲ್ಲಿ ಹೊಸ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದೇವೆ. ಆದರೆ ಈಗ ಮನೆಗೆ ಬೇಕಾದ ಪೀಠೋಪಕರಣ ಮತ್ತು ಇತರ ವಸ್ತುಗಳನ್ನು ಖರೀದಿಸುವುದು ಸುಲಭವಾಗಿದೆ ಎಂದು ಪೇದೆ ಅಶೋಕ್ ಸಂತೋಷದಿಂದ ಹೇಳಿದ್ದಾರೆ.
“ನಾನು ಎರಡನೇ ಬಾರಿಗೆ ಈ ಲಾಟರಿ ಟಿಕೆಟ್ ಖರೀದಿಸಿದ್ದು, ಈ ಬಾರಿ ನನಗೆ 2 ಕೋಟಿ ರೂ. ಗೆಲ್ಲುವ ಟಿಕೆಟ್ ನೀಡಬೇಕು ಎಂದು ಏಜೆಂಟ್ ಬಳಿ ತಮಾಷೆಯಾಗಿ ಹೇಳಿದ್ದೆ. ಆದರೆ ಅದು ನಿಜವಾಗಿದೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv