ಹಾಸನ: ಜಗಳ (Uproar) ಬಿಡಿಸಲು ಹೋದ ಪೊಲೀಸ್ ಪೇದೆ (Police Constable) ಮೇಲೆ ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ (Attack) ನಡೆಸಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ (Holenarasipura) ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮಳಲಿ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ಯಸಳೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶರತ್ ಹಲ್ಲೆಗೊಳಗಾಗಿದ್ದಾರೆ. ಶರತ್ ಹೊಳೆನರಸೀಪುರ ತಾಲೂಕಿನ ಕುಂದೂರು ಹೋಬಳಿಯ ಎಸ್.ಹೊನ್ನೇನಹಳ್ಳಿ ಗ್ರಾಮದವರಾಗಿದ್ದು, ಜೂ.15ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬ ಯುವಕನಿಗೆ ಶರತ್ ಅವರ ಗ್ರಾಮಕ್ಕೆ ಸೇರಿದ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡುತ್ತಿದ್ದರು. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು
- Advertisement -
- Advertisement -
ಈ ಸಂದರ್ಭ ಶರತ್ ಜಗಳ ಬಿಡಿಸಲು ಹೋಗಿದ್ದು, ಮಿಥುನ್, ಲೋಹಿತ್, ನಟರಾಜ ಹಾಗೂ ಇತರರು ಶರತ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ನಟರಾಜ ಎಂಬ ಆರೋಪಿ ಶರತ್ ತಲೆಗೆ ಕಲ್ಲಿನಿಂದ ಹೊಡೆದು ಕಾರಿನಿಂದ ಲಾಂಗ್ ತಂದಿದ್ದು, ಇದನ್ನು ನೋಡಿದ ಶರತ್ ಕನ್ವೆನ್ಷನ್ ಹಾಲ್ ಒಳಗೆ ಓಡಿದ್ದಾರೆ. ಈ ವೇಳೆ ಪುಂಡರೂ ಸಹ ಕನ್ವೆನ್ಷನ್ ಹಾಲ್ ಒಳಗೆ ನುಗ್ಗಿ ಶರತ್ ಮೇಲೆ ಮನಬಂದಂತೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದಲ್ಲಿ ಬಲಿಯಾದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ
- Advertisement -
- Advertisement -
ಹಲ್ಲೆಯಿಂದಾಗಿ ಶರತ್ ಹಾಲ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಈ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶರತ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರಯಾಗಿದ್ದು, ಸದ್ಯ ಗಾಯಾಳು ಶರತ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಊರಿಗೆ ಹೋಗೋಣವೆಂದು ಕರ್ಕೊಂಡು ಬಂದು ಮಕ್ಕಳೆದುರೇ ದಾರಿ ಮಧ್ಯೆ ಪತ್ನಿಯನ್ನ ಹೊಡೆದು ಕೊಂದ!