CrimeDistrictsKarnatakaLatestMain PostTumakuru

ಮಹಿಳೆ ಮೇಲೆ ಪೊಲೀಸ್ ಪೇದೆ ಅತ್ಯಾಚಾರಕ್ಕೆ ಯತ್ನ – ಬಂಧನ

Advertisements

ತುಮಕೂರು: ಮಹಿಳೆ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಮಂಜುನಾಥ್ ಬಂಧಿತ ಆರೋಪಿ.

ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಮಂಜುನಾಥ್, ತಿಪಟೂರು ಡಿವೈಎಸ್‌ಪಿಗೆ ಎಸ್‌ಬಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಜೂನ್ 28ರಂದು ಬೆಳಗ್ಗೆ 10 ಗಂಟೆಗೆ ಕಿಬ್ಬನಹಳ್ಳಿಯಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ಭೂಕುಸಿತ – 7 ಸಾವು, 23 ಮಂದಿ ನಾಪತ್ತೆ

POLICE JEEP

ಸಂತ್ರಸ್ತೆಯ ಗಂಡ ಹೋಟೆಲ್ ಸಾಮಾನುಗಳನ್ನು ತರಲು ತಿಪಟೂರಿಗೆ ಹೋಗಿದ್ದ. ಈ ವೇಳೆ, ತಿಂಡಿ ತಿನ್ನುವ ನೆಪದಲ್ಲಿ ಹೋಟೆಲ್ ಬಳಿ ಬಂದಿದ್ದ ಮಂಜುನಾಥ್, ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಲ್ಲದೇ ಲೈಂಗಿಕವಾಗಿ ಸಹಕರಿಸದಿದ್ದರೆ ಹೋಟೆಲ್ ಬಂದ್ ಮಾಡಿಸುವುದಾಗಿ ಮಹಿಳೆಗೆ ಬೆದರಿಕೆಯೂ ಹಾಕಿದ್ದಾನೆ. ಇದನ್ನೂ ಓದಿ: ಕಲ್ಲಿನಿಂದ ಹೊಡೆದು ಕೋತಿಯನ್ನು ಕೊಂದ ದುಷ್ಟರು – ಮೂವರು ಅರೆಸ್ಟ್

ಸಂತ್ರಸ್ತೆ ಕೂಡಲೆ ತನ್ನ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ಘಟನೆಗೆ ಸಂಬಂಧಿಸಿದಂತೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 354(ಎ), 354(ಬಿ), 448, 506, 509, ಹಾಗೂ ಇತರ ಕಲಂ ರೀತಿ ಕೇಸ್ ದಾಖಲಾಗಿದೆ. ಸದ್ಯ ಪೊಲೀಸ್ ಕಾನ್‌ಸ್ಟೇಬಲ್ ಮಂಜುನಾಥ್‌ನನ್ನು ಬಂಧಿಸಿ, ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Live Tv

Leave a Reply

Your email address will not be published.

Back to top button