ಹಾಸನ: ಕುಡಿದ ಅಮಲಿನಲ್ಲಿ ಪೊಲೀಸ್ ಪೇದೆಯೋರ್ವ ರಂಪಾಟ ಮಾಡಿದ ಘಟನೆ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಾಗೇಶ್ ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿದ ಪೇದೆ. ನಾಗೇಶ್ ಶ್ರವಣಬೆಳಗೊಳ ಪೇದೆಯಾಗಿದ್ದು, ನಶೆಯಲ್ಲಿ ಪೊಲೀಸರಿಗೂ ಅಶ್ಲೀಲ ಪದ ಬಳಸಿ ಅವಾಜ್ ಹಾಕಿದ್ದಾರೆ.
ನಾಗೇಶ್ ಕುಡಿದು ಅಂಗಡಿ ಮುಂಗಟ್ಟು ಎದುರು ಗಲಾಟೆ ಮಾಡಿದ್ದಾರೆ. ಫುಲ್ ಟೈಟ್ ಆಗಿ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರಿಗೆ ನಿಂದಿಸಿದ್ದಾರೆ. ಅಲ್ಲದೇ ಹಣಕ್ಕಾಗಿ ಬೇಡಿಕೆ ಇಟ್ಟು ಕೊಡದಿದ್ರೆ ದಾಂಧಲೆ ನಡೆಸಿ ದರ್ಪ ತೋರಿದ್ದಾರೆ.
https://www.youtube.com/watch?v=La-DF5UEnhc