ಕೊಪ್ಪಳದಲ್ಲಿ ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದ ಪೊಲೀಸ್ ಪೇದೆ – ವೀಡಿಯೋ ವೈರಲ್

Public TV
1 Min Read
Koppal Police Constable Milk Theft

– ಸಾರ್ವಜನಿಕರಿಂದ ಕ್ರಮಕ್ಕೆ ಆಗ್ರಹ

ಕೊಪ್ಪಳ: ರಾತ್ರಿ ಡ್ಯೂಟಿ (Night Shift) ವೇಳೆ ಪೊಲೀಸ್ ಪೇದೆಯೊಬ್ಬರು (Police Constable) ಹಾಲಿನ ಡೈರಿ ಮುಂದೆ ಇಟ್ಟಿದ್ದ ಟ್ರೇನಿಂದ ಹಾಲು ಕದ್ದಿರುವ (Milk Theft) ಘಟನೆ ಕೊಪ್ಪಳದ (Koppal) ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.

ಶಿವಾನಂದ ಸಜ್ಜನ್ ಹಾಲು ಕದ್ದಿರುವ ಪೊಲೀಸ್ ಪೇದೆ. ಡಿವೈಎಸ್ಪಿ ಕಚೇರಿಯಲ್ಲಿ ಪೇದೆಯಾಗಿರುವ ಶಿವಾನಂದ ಸಜ್ಜನ್ ಆ.29 ರಂದು ರಾತ್ರಿ ಕರ್ತವ್ಯದ ವೇಳೆ ಹಾಲು ಕದ್ದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪೇದೆ ಹಾಲು ಕದ್ದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಚಾರ್ಜ್‌ಶೀಟ್‌ನಲ್ಲಿ ಗೌಪ್ಯ ಮಾಹಿತಿ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ: ಕೋರ್ಟ್‌ ಮೊರೆ ಹೋದ ದರ್ಶನ್‌

ಶಿವಾನಂದ್ ಸಜ್ಜನ್ ಬೈಕ್ ಮೂಲಕ ಬಂದು ರಾತ್ರಿ ಹಾಲಿನ ಡೈರಿ ಮುಂದೆ ಇಟ್ಟಿದ್ದ ಟ್ರೇನಿಂದ ಹಾಲು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಶಿವಾನಂದ ಸಜ್ಜನ್ ಹಾಲು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿ ಟಿವಿ ಇರುವುದನ್ನು ಗಮನಿಸಿಯೂ ಶಿವಾನಂದ ಸಜ್ಜನ್ ಹಾಲು ಕಳ್ಳತನ ಮಾಡಿದ್ದು, ಕಾಯುವವರೇ ಕಳ್ಳರಾದರೇ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪೊಲೀಸ್ ಪೇದೆ ಹಾಲು ಕಳ್ಳತನಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಾನಂದ ಸಜ್ಜನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ಅಪಘಾತ – ಗುದ್ದಿದ ರಭಸಕ್ಕೆ ಕಾರಿನ ಮೇಲಿನಿಂದ ಬಿದ್ದ ಸವಾರ

Share This Article