ಹಾಸನ: ಟೊಮೆಟೊ (Tomato) ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಖರೀದಿ ಮಾಡೋದಂತೂ ದೂರದ ಮಾತಾಗಿಬಿಟ್ಟಿದೆ. ಬೆಲೆ ಏರಿಕೆ ಇದ್ದರೂ ಬೇಡಿಕೆ ಮಾತ್ರ ತಗ್ಗಿಲ್ಲ. ಇದೀಗ ಚಿನ್ನದ ಬೆಲೆ ಎನಿಸಿಕೊಂಡಿರೋ ಟೊಮೆಟೊವನ್ನು ಭರ್ಜರಿಯಾಗಿ ಬೆಳೆದು ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬರು ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ.
ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ. ಇವರು ಒಂದು ಎಕರೆ 6 ಗುಂಟೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದು, ಈಗಾಗಲೇ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಬೈರೇಶ್ ಇತ್ತೀಚೆಗೆ ಸಾವಿರ ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಹಣ್ಣು ನಿರೀಕ್ಷೆಯಲ್ಲಿದ್ದಾರೆ. ಸರ್ಕಾರಿ ಕೆಲಸದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಬೈರೇಶ್ ಲಕ್ಷಾಂತರ ರೂ. ಲಾಭ ಪಡೆದಿದ್ದಾರೆ.
ಟೊಮೆಟೊ ಬೆಲೆ ಏರಿಕೆ ಹಿನ್ನೆಲೆ ಅಲ್ಲಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಪೊಲೀಸ್ ಪೇದೆ ಬೈರೇಶ್ ಹೊಲಕ್ಕೂ ಕಳ್ಳರ ಕಾಟ ತಪ್ಪಿಲ್ಲ. ಕಳ್ಳರು ಈಗಾಗಲೇ ಬೈರೇಶ್ ಹೊಲದಿಂದ ನೂರಾರು ಬಾಕ್ಸ್ ಟೊಮೆಟೊ ಕಳ್ಳತನ ಮಾಡಿದ್ದಾರೆ. ನಂತರ ಎಚ್ಚೆತ್ತುಕೊಂಡ ಅವರು ರಾತ್ರಿಯಿಡೀ ಹೊಲದಲ್ಲಿ ಕಾವಲು ಕಾದು ಟೊಮೆಟೊಗಳನ್ನು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ನಕಲಿ ಪಾಸ್ ಹಾವಳಿ – 4 ದಿನದಲ್ಲಿ 300ಕ್ಕೂ ಹೆಚ್ಚು ನಕಲಿ ಪಾಸ್
ಉಡುಪಿ, ಮಂಗಳೂರಿನಿಂದ ವರ್ತಕರು ಆಗಮಿಸಿ ಬೈರೇಶ್ ಹೊಲದಿಂದ ಟೊಮೆಟೊ ಖರೀದಿ ಮಾಡುತ್ತಾರೆ. ಮಳೆ ಕೊರತೆ, ರೋಗ ಬಾಧೆ, ಕಳ್ಳರ ಕಾಟದ ನಡುವೆಯೂ ಟೊಮೆಟೊ ಬೆಳೆದು ಭರ್ಜರಿ ಆದಾಯ ಗಳಿಸಿರುವ ಬೈರೇಶ್ ಇತರರಿಗೂ ಮಾದರಿಯಾಗಿದ್ದರೆ. ಇದನ್ನೂ ಓದಿ: ಆಷಾಢ ಮಾಸದ ಕೊನೆ ಶುಕ್ರವಾರ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ
Web Stories