ಬೆಂಗಳೂರು: ಅನಾಥ ಮಗುವಿಗೆ ಎದೆ ಹಾಲುಣಿಸಿ ಮಹಿಳಾ ಪೊಲೀಸ್ ಪೇದೆಯೊಬ್ಬರು ತಾಯ್ತನ ಮೆರೆದಿದ್ದಾರೆ.
ಯಲಹಂಕ ಠಾಣೆಯ ಸಂಗೀತ ಹಳಿಮನಿ ಮಗುವಿಗೆ ಹಾಲುಣಿಸಿದ ಪೇದೆ. ಬುಧವಾರ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಹೆಣ್ಣು ಮಗುವೊಂದು ಕಾಣಿಸಿಕೊಂಡಿತ್ತು. ಕೂಡಲೇ ಅಲ್ಲಿಯೇ ಇದ್ದ ಸಿವಿಲ್ ಡಿಫೆನ್ಸ್ ಮಂದಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
Advertisement
ಹಾಲು ಹಾಗೂ ಗ್ಲೂಕೋಸ್ ಇಲ್ಲದೇ ಹೆಣ್ಣು ಮಗು ಬಳಲುತ್ತಿತ್ತು. ಸ್ಥಳದಲ್ಲಿಯೇ ಇದ್ದ ಸಂಗೀತ ಕೂಡಲೇ ಮಗುವಿಗೆ ಹಾಲು ಉಣಿಸಿ ಸಾರ್ಥಕತೆ ಮೆರೆದಿದ್ದಾರೆ. ಸಂಗೀತಾ ಅವರ ಕಾರ್ಯಕ್ಕೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಮಗುವಿನ ಸ್ಥಿತಿ ಆರೋಗ್ಯವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿನ ಸ್ಥಿತಿ ಗತಿ ತಿಳಿದುಕೊಂಡ ಬಳಿಕ ವೈದ್ಯರು ಮಕ್ಕಳ ಕಲ್ಯಾಣ ಇಲಾಖೆಗೆ ಮಗುವನ್ನು ಹಸ್ತಾಂತರಿಸಲಿದ್ದಾರೆ.
Advertisement
Advertisement
ಕಳೆದ ವರ್ಷ ತಾಯಿಯೊಬ್ಬಳು ತನ್ನ ಮಗುವನ್ನು ಪೊದೆಯೊಂದರ ಬಳಿ ಎಸೆದು ಹೋಗಿದ್ದಳು. ರಸ್ತೆಯಲ್ಲಿ ಓಡಾಡೋ ಜನ ಮಗುವಿನ ಅಳುವಿನ ಶಬ್ಧ ಕೇಳಿ ಮಗುವನ್ನು ರಕ್ಷಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದರು. ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿನ ಕೂಗಿಗೆ ಕೆಲವು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕೆಲಸಕ್ಕೆ ಬಂದಿದ್ದ ಮಹಿಳಾ ಪೇದೆ ಅರ್ಚನಾ ಎಂಬವರು ಹಿಂದು-ಮುಂದು ನೋಡದೇ ಹಾಲುಣಿಸಿ ಮಗುವನ್ನು ಬಾಲವಿಹಾರಕ್ಕೆ ಕಳುಹಿಸಿದ್ದರು. ಆದರೆ ಬಾಲವಿಹಾರದಲ್ಲಿ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು.
Advertisement
ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲುಣಿಸಿದಕ್ಕೆ ಅರ್ಚನಾ ಅವರಿಗೆ ಬಿಬಿಎಂಪಿ ವತಿಯಿಂದ ಸನ್ಮಾನ ಮಾಡಿ ಸೀರೆ ಹಾಗೂ ಕೆಂಪೇಗೌಡ ಪದಕ ನೀಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv