ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ಅತಿಯಾದ ಡಿ.ಜೆ ಸೌಂಡ್ (DJ Sound) ಹಾಕಿ ಮೋಜು ಮಸ್ತಿ ಮಾಡುತ್ತಿದ್ದ ಪಬ್ (Pubs) ಮತ್ತು ರೆಸ್ಟೋರೆಂಟ್‍ಗಳ (Restaurants) ಮೇಲೆ ಪೊಲೀಸರು ದಾಳಿ ನಡೆಸಿ ಕೇಸ್ ದಾಖಲಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದಲ್ಲಿನ ಬೋ ಟೈ, ಇಕಿಗೈ ಮತ್ತು ಸ್ಕೈ ಬಾರ್ ಸೇರಿದಂತೆ ವಿವಿಧ ಪಬ್‍ಗಳ ಮೇಲೆ ದಾಳಿ ನಡೆಸಿದ ಬೆಂಗಳೂರಿನ (Bengaluru) ಕೇಂದ್ರ ವಿಭಾಗದ ಪೊಲೀಸರ ತಂಡ, ಅತಿಯಾದ ಡಿ.ಜೆ ಸೌಂಡ್ ಹಾಕಿ ಮೋಜು ಮಸ್ತಿ ಮಾಡುತ್ತಿದ್ದ ಪಬ್‍ಗಳ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಅಪ್ರಾಪ್ತರಿಗೆ ಪಬ್‍ಗೆ ಪ್ರವೇಶ ನೀಡಿ ಮದ್ಯ ಸೇವನೆ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನೆಚ್ಚಿನ ಫುಟ್‌ಬಾಲ್ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ ತಂಡಕ್ಕೆ ದಾಳಿ ವೇಳೆ ನಿಯಮ ಉಲ್ಲಂಘನೆ ಮಾಡಿರೋದು ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘಿಸಿದ ಪಬ್‍ಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋದ ಪ್ರಕರಣ – ಇಬ್ಬರ ಮೃತದೇಹ ಪತ್ತೆ