ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರಿಗೆ ಟೆನ್ಶನ್ ಆರಂಭವಾದ್ರೆ, ಮತ್ತೊಂದೆಡೆ ಪುಡಿ ರೌಡಿಗಳಿಗೂ ಚುನಾವಣೆ ಹೊಸ್ತಿಲಲ್ಲಿ ನಡುಕ ಶುರುವಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಒಂದೆಡೆ ರಾಜಕೀಯ ನಾಯಕರು ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಹುಬ್ಬಳ್ಳಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಜಿಲ್ಲೆಯಲ್ಲಿರೋ ಪುಡಿರೌಡಿಗಳು, ರೌಡಿಶೀಟರ್ ಗಳನ್ನು ಕರೆಸಿ ಪರೇಡ್ ನಡಿಸಿದ್ದಾರೆ.
Advertisement
Advertisement
ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿರುವ ಪೊಲೀಸ್ ಮೈದಾನದಲ್ಲಿ ಶುಕ್ರವಾರ 500ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚಿದ್ರೆ, ಗಡಿಪಾರು ಮಾಡಿ ಬಾಲ ಕಟ್ ಮಾಡುವುದಾಗಿ ಪೊಲೀಸ್ ಕಮಿಷನರ್ ಎಂ ಎನ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
Advertisement
ಚೀಟರ್ ಮೋನ್ಯಾ, ಮುಕ್ತುಂ ಸೊಗಲದ, ದತ್ತುಸಾ ಲದ್ವಾ ಹಾಗೂ ರಜನಿಕಾಂತ್ ಬಿಜಬಾಡ್ ರನ್ನ ಈಗಾಗಲೇ ಗಡೀಪಾರು ಮಾಡಲಾಗಿದೆ. ಇದರ ಬೆನ್ನಲ್ಲೆ ಎಲ್ಲೆಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Advertisement
ಒಟ್ಟಿನಲ್ಲಿ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಮೂಲಕ ನಗರದಲ್ಲಿರುವ ಪುಡಿರೌಡಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv