ಬೆಂಗಳೂರು: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಕರೆದಿರುವ ಭಾರತ್ ಬಂದ್‍ಗೆ ಎಲ್ಲೆಡೆ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಈಗಾಗಲೇ 46 ಸಂಘಟನೆಗಳು ಪ್ರತಿಭಟನೆಗೆ ಅವಕಾಶವನ್ನು ಪಡೆದುಕೊಂಡಿವೆ. ಆದರೆ ಪೊಲೀಸ್ ಇಲಾಖೆ ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ ಸೂಚನೆ ನೀಡಲಾಗಿದೆ.
ನಾಳೆಯ ಭಾರತ್ ಬಂದ್‍ಗೆ ಖಡಕ್ ಸೂಚನೆಗಳನ್ನು ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರತಿಯೊಂದು ಸ್ಟೇಷನ್ ವ್ಯಾಪ್ತಿಯ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮ ಎಚ್ಚರಿಕೆಯನ್ನೂ ಮೀರಿ ಪ್ರತಿಭಟನಾ ರ‍್ಯಾಲಿಗಳು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸೋದು, ಕಲ್ಲು ತೂರಾಟ ಮಾಡಿದ ಕುರಿತು ವರದಿಯಾದರೆ ಅದಕ್ಕೆ ಇನ್ಸ್‍ಪೆಕ್ಟರ್‍ಗಳೇ ಜವಾಬ್ದಾರಿ ಎಂದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಬುಧವಾರ ಭಾರತ್ ಬಂದ್ – ಏನು ಇರುತ್ತೆ? ಏನು ಇರಲ್ಲ?
Advertisement
ಇಂದು ರಾತ್ರಿಯಿಂದಲೇ ಅತಿ ಹೆಚ್ಚು ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಬೆಳ್ಳಂಬೆಳಗ್ಗೆ ಸಂಚರಿಸುವ ಬಸ್‍ಗಳಿಗೂ ಭದ್ರತೆಯನ್ನು ಒದಗಿಸಬೇಕು. ಗುಂಪು ಸೇರಿ ಹೊಂಚು ಹಾಕುವವರ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.