– ಇತ್ತ ಧನ್ಯವಾದ ಅರ್ಪಿಸಿದ ಈಶ್ವರಪ್ಪ
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಮಂದಿ ಮೆಡಿಸಿನ್ ಗಳಿಗೆ ಪರದಾಡುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲರ ಕರೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ. ದಯವಿಟ್ಟು ನಿಮ್ಮ ಪೊಲೀಸ್ ಕಾರುಗಳನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಪೊಲೀಸ್ ಆಯುಕ್ತರು ಟ್ವೀಟ್ ಮಾಡುತ್ತಿದ್ದಂತೆಯೇ ಅನೇಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಎಲ್ಲರಿಗೂ ಉತ್ತರಿಸಿದ್ದಾರೆ.
Every call is taken Seriously, please use your Police car. pic.twitter.com/GtcRLXzEx5
— Bhaskar Rao (@Nimmabhaskar22) April 11, 2020
ಮುಖ್ಯವಾಗಿ ಗರ್ಭಿಣಿಯರು ಈ ಬಗ್ಗೆ ಪ್ರಶ್ನೆ ಮಾಡಿದ್ದು, ಚೆಕಪ್‍ಗೆ ಆಗಾಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಹೀಗಾಗಿ ನಮಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಭಾಸ್ಕರ್ ರಾವ್, ದಯಮಾಡಿ 108 ನಂಬರಿಗೆ ಕರೆ ಮಾಡಿ ಹೊಯ್ಸಳದ ಸಹಾಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಜನರ ಎಲ್ಲಾ ತುರ್ತು ಸೇವೆಗಳಿಗೂ ಸ್ಪಂದಿಸುತ್ತಿರುವ, ನಮ್ಮ ರಾಜ್ಯದ ಪೊಲೀಸರ ನಿಶ್ಚಲ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು. https://t.co/eDNDlPBghI
— K S Eshwarappa (@ikseshwarappa) April 11, 2020
ಇತ್ತ ಭಾಸ್ಕರ್ ರಾವ್ ಟ್ವೀಟ್ ಗೆ ರೀಟ್ವೀಟ್ ಮಾಡಿರುವ ಈಶ್ವರಪ್ಪ, ಜನರ ಎಲ್ಲಾ ತುರ್ತು ಸೇವೆಗಳಿಗೂ ಸ್ಪಂದಿಸುತ್ತಿರುವ, ನಮ್ಮ ರಾಜ್ಯದ ಪೊಲೀಸರ ನಿಶ್ಚಲ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.