ದೀಪ ಬೆಳಗೋ ನೆಪದಲ್ಲಿ ರಸ್ತೆಗೆ ಬಂದ್ರೆ ಬೀಳುತ್ತೆ ಕೇಸ್ – ಕಮೀಷನರ್ ವಾರ್ನಿಂಗ್

Public TV
1 Min Read
Bhaskar Rao

ಬೆಂಗಳೂರು: ಮಹಾಮಾರಿ ಕೊರೊನಾ ಓಡಿಸಲು ದೀಪ ಹಚ್ಚಿ ಎಂದು ಪ್ರಧಾನಿ ಮೋದಿ ಅವರು ನಾಡಿನ ಜನತೆಗೆ ಕರೆ ಕೊಟ್ಟಿದ್ದಾರೆ. ಇತ್ತ ಬೆಂಗಳೂರಲ್ಲಿ ದೀಪ ಹಚ್ಚೋ ಹೆಸರಲ್ಲಿ ರಸ್ತೆಗೆ ಬಂದರೆ ಕೇಸ್ ಹಾಕಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಜನ ಅಪ್ಪಿ ತಪ್ಪಿಯೂ ರಸ್ತೆಯಲ್ಲಿ ದೀಪ ಹಚ್ಚೋದಾಗಲಿ, ಪಂಜು ಹಚ್ಚುವುದಾಗಿ ಮಾಡುವಂತಿಲ್ಲ. ದೀಪ ಹಾಗೂ ಮೇಣದಬತ್ತಿಯನ್ನು ಅವರವರ ಮನೆಯ ಟೆರೆಸ್ ಹಾಗೂ ಬಾಲ್ಕನಿಯಲ್ಲಿ ಹಚ್ಚಬೇಕು. ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿ ಇರುತ್ತೆ, ಯಾವುದೇ ಕಾರಣಕ್ಕೂ ಗುಂಪು ಸೇರದೇ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲೂ ದೀಪ ಹಚ್ಚಬಾರದು ಎಂದು ತಿಳಿಸಿದ್ದಾರೆ.

DEEPAVALI 10

ರಾತ್ರಿ 9 ಗಂಟೆ 9 ನಿಮಿಷಕ್ಕೆ ಸರಿಯಾಗಿ ದೀಪ ಹಾಗೂ ಮೊಂಬತ್ತಿ ಹಚ್ಚಿಸಬೇಕು. ಒಂದು ವೇಳೆ ಲಾಕ್‍ಡೌನ್ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾಸ್ಕರ್ ರಾವ್ ವಾರ್ನಿಂಗ್ ಕೊಟ್ಟಿದ್ದಾರೆ.

ಶುಕ್ರವಾರ ಪ್ರಧಾನಿ ಮೋದಿ ಅವರು ಟ್ವಿಟ್ಟರಿನಲ್ಲಿ ಲೈವ್ ಬಂದಿದ್ದು, ಲಾಕ್‍ಡೌನ್ ಮುಖ್ಯ. ಇದು ಒಬ್ಬರ ಹೋರಾಟ ಅಲ್ಲ. ಇದಕ್ಕೆ ಸಾಮೂಹಿಕ ಶಕ್ತಿಯ ಅವಶ್ಯಕತೆ ಇದೆ. ಜನತಾ ಜನಾರ್ದನ ಈಶ್ವರನಾ ರೂಪವಾಗಿದೆ. ಹೀಗಾಗಿ ಅಂದಕಾರದ ನಡುವೆ ನಾವು ಪ್ರಕಾಶಮಾನವಾಗಿರಬೇಕು. ನಮ್ಮ ಬಡವರು ಕೊರೊನಾ ನಿರಾಸೆಯಿಂದ ಸಂಕಷ್ಟ ನಡುವೆ ಆಶಾಕಿರಣವಾಗಿದ್ದಾರೆ. ಆದ್ದರಿಂದ ಕೊರೊನಾ ಅನ್ನೋ ಅಂಧಕಾರದಿಂದ ಬೆಳಕಿನತ್ತ ಹೋಗುತ್ತಿದ್ದೇವೆ ಎಂದಿದ್ದರು.

Modi 1

ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಇಬ್ಬರೇ ಇಲ್ಲ, ಎಲ್ಲರೂ ಒಗ್ಗಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಮತ್ತೊಮ್ಮೆ ಜನರಿಗೆ ಕರೆ ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *