ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಶ್ರೀಮಂತರ ಕಾರುಗಳಿಗೆ ಎಸ್ಕಾರ್ಟ್ ಭದ್ರತೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಪೊಲೀಸರು ಗುರಿಯಾಗಿದ್ದಾರೆ. ಪ್ರವಾಸಕ್ಕೆ ಬಂದ ಕಾರುಗಳಿಗೆ ಈ ರೀತಿ ಭದ್ರತೆ ನೀಡೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಜಾಗ್ವಾರ್, ಫೆರಾರಿ ಸೇರಿದಂತೆ ವಿವಿಧ ಐಶಾರಾಮಿ ಕಾರುಗಳು ಚಿಕ್ಕಮಗಳೂರಿನ ಗುಂಡಿ-ಗೊಟರಿನ ರಸ್ತೆಯಲ್ಲಿ ಓಡಾಡಿವೆ. ಎಲ್ಲ ಕಾರುಗಳು ಒಂದೊಂದು ರಾಜ್ಯದ ನೋಂದಣಿ ಹೊಂದಿದ್ದು, ಶ್ರೀಮಂತರ ಮಕ್ಕಳು ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಹೀಗಾಗಿ ಪ್ರಭಾವಿಗಳು ಆಗಿದ್ದರಿಂದ ಪೊಲೀಸರು ಎಸ್ಕಾರ್ಟ್ ಭದ್ರತೆಯನ್ನು ಕಲ್ಪಿಸಿದ್ದರು ಎನ್ನಲಾಗಿದೆ. ನಾಳೆ ನಮ್ಮ ಕಾರುಗಳಿಗೂ ಪೊಲೀಸರು ಈ ರೀತಿಯ ಭದ್ರತೆ ಕೊಡ್ತಾರಾ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.
Advertisement
Advertisement
ಟ್ರಾಫಿಕ್ ಹೆಚ್ಚಾಗಿದ್ದರಿಂದ ಸಂಚಾರ ನಿಯಂತ್ರಣಕ್ಕಾಗಿ ಸಿಬ್ಬಂದಿ ಹೋಗಿದ್ರು ಎಂದು ಪೊಲೀಸರು ಹಾರಿಕೆಯ ಉತ್ತರ ನೀಡಿದ್ದಾರೆ. ಐಶಾರಾಮಿ ಕಾರುಗಳನ್ನು ನೋಡಿದ ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದು ಖುಷಿಪಟ್ಟರು.