ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಅವರ ಪುತ್ರ ಅಜಿತ್ ಪ್ರಸಾದ್ ವಿರುದ್ಧ ಅಪಹರಣ, ಬೆದರಿಕೆ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ರವಿ ತಿವಾರಿ ಎಂಬವರು ಇಲ್ಲಿನ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ. ದೂರಿನ ಅಡಿ ಬಿಎನ್‍ಎಸ್ ಸೆಕ್ಷನ್ 140 (3) (ಅಪಹರಣ), 115 (2) (ಹಲ್ಲೆ), 351 (3) (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೆಲಸ ಬಿಟ್ಟು ಬೈಕ್ ಸಾಲ ಹೇಗೆ ಕಟ್ತೀಯಾ?: ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಯುವಕ
- Advertisement -
- Advertisement -
ಶನಿವಾರ ಮಧ್ಯಾಹ್ನ ಜಮೀನು ಖರೀದಿ ಕಮಿಷನ್ ವಿಚಾರದಲ್ಲಿ ಅಜಿತ್ ಪ್ರಸಾದ್ ಹಾಗೂ ರವಿ ತಿವಾರಿ ನಡುವೆ ಗಲಾಟೆಯಾಗಿದೆ. ನಂತರ ಫೈಜಾಬಾದ್ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯ ಬಳಿ ಅಜಿತ್ ಪ್ರಸಾದ್ ಮತ್ತು ಇತರ ಐದಾರು ಮಂದಿ ತಿವಾರಿಯವರನ್ನು ಅಪಹರಿಸಿ, ಹಲ್ಲೆ, ಬೆದರಿಕೆ ಹಾಕಿದ್ದಾರೆ ಎಂದು ಎಫ್‍ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ತನಿಖೆ ನಡೆಯತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -
- Advertisement -
ಆಸ್ತಿ ವ್ಯವಹಾರದಲ್ಲಿ ತೊಡಗಿರುವ ಅಜಿತ್ ಪ್ರಸಾದ್ ಅವರು ಮಿಲ್ಕಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಪ್ರಸಾದ್ ತಂದೆ ಇಲ್ಲಿನ ಶಾಸಕರಾಗಿದ್ದರು. ಅವರು ಸಂಸದರಾಗಿ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಭೀಕರ ಹತ್ಯೆ; ಅಶ್ರಫ್ ಸೇರಿ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ