ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೇಶದ್ಯಾಂತ ಪ್ರತಿಭಟನೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸೆಕ್ಷನ್ 144 ಈಗಾಗಲೇ ಜಾರಿಗೊಳಿಸಲಾಗಿದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು ಗುರುವಾರ ಮಂಗಳೂರಿನಲ್ಲಿ ಗೋಲಿಬಾರ್ ಮಾಡಲಾಗಿ ಇಬ್ಬರು ಮೃತರಾಗಿದ್ದರು.
Advertisement
ಜೊತೆಗೆ ಬೆಂಗಳೂರಿನ ಟೌನ್ ಹಾಲ್ ಮತ್ತು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಲು ಸಾವಿರಾರು ಜನ ಸೇರಿದರು. ಪೊಲೀಸರು ಯಾವುದೇ ಅಹಿತಕರ ಘಟನೆಗಳು ಆಗದಂತೆ ಕ್ರಮವಹಿಸಿ ಪ್ರತಿಭಟನಾಕಾರರನ್ನ ಬಂಧಿಸಿದ್ದರು.
Advertisement
ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಸ್ಲಿಂ ಮುಖಂಡರೊಂದಿಗೆ ಪೊಲೀಸರು ಸಭೆ ಮಾಡಿದ್ದಾರೆ. ಮಡಿವಾಳದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಪೊಲೀಸರು ಮಸೀದಿಯೊಂದರಲ್ಲಿ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮಡಿವಾಳ ವಿಭಾಗ ಎಸಿಪಿ ಕರಿಬಸವನಗೌಡ ಪೌರತ್ವ ಕಾಯ್ದೆಯ ಬಗ್ಗೆ ವಿವರಿಸಿ ಕಾಯ್ದೆಯ ತಿದ್ದುಪಡಿಯಲ್ಲಿ ಯಾವೆಲ್ಲ ಅಂಶಗಳಿವೆ, ಇದರಿಂದ ಏನಾಗುತ್ತದೆ ಅನ್ನೋದನ್ನು ಮುಸ್ಲಿಂ ಸಮುದಾಯದವರಿಗೆ ತಿಳಿ ಹೇಳುವ ಕೆಲಸವನ್ನು ಮಾಡಿದ್ದಾರೆ.