ಬೆಂಗಳೂರು: ರೌಡಿಶೀಟರ್ ಬೆತ್ತನಗೆರೆ ಶಂಕರ (Bettanagere Shankara) ರಾಜಕೀಯಕ್ಕೆ ಎಂಟ್ರಿಕೊಡಲು ಕಸರತ್ತು ನಡೆಸುತ್ತಿದ್ದಾನೆ. ರಾಜಕೀಯದಾಟಕ್ಕೆ ಎಂಟ್ರಿ ಕೊಡಲು ಮುಂದಾಗಿರೋ ಶಂಕರನಿಗೆ ಪೊಲೀಸರು ಶಾಕ್ ಕೊಡಲು ಮುಂದಾಗಿದ್ದಾರೆ. ತಾನು ಆಕಾಂಕ್ಷಿಯಾಗಲು ಹೊರಟಿರೋ ಜಿಲ್ಲೆ ಮೈಸೂರಿನಿಂದಲೇ ಗಡಿಪಾರು ಮಾಡಲು ಪೊಲೀಸರು ಚಿಂತನೆ ನಡೆಸ್ತಿದ್ದಾರೆ.
Advertisement
ನೆಲಮಂಗಲ ಠಾಣೆ (Nelamangala Police Station) ರೌಡಿಶೀಟರ್ ಆಗಿರೋ ಬೆತ್ತನಗೆರೆ ಶಂಕರ ಹೆಚ್.ಡಿ. ಕೋಟೆಯಿಂದ ಜಿಲ್ಲಾ ಪಂಚಾಯ್ತಿಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ಬಿಜೆಪಿ (BJP) ಏನೋ ಶಂಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಪೊಲೀಸರು ಮಾತ್ರ ಅವನ ಆಸೆಗೆ ತಣ್ಣೀರು ಎರಚಲು ಮುಂದಾಗಿದ್ದಾರೆ. ಕೊಲೆ, ಸುಪಾರಿ, ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಸೇರಿದಂತೆ 15 ಕ್ಕೂ ಹೆಚ್ಚು ಪ್ರಕರಣಗಳಿಂದ ಮೇಲಿಂದ ಮೇಲೆ ಶಂಕರನ ಮೇಲೆ ಎಫ್‍ಐಆರ್ ಗಳು ದಾಖಲಾಗುತ್ತಿದೆ. ಇದನ್ನೂ ಓದಿ; ರೌಡಿಶೀಟರ್ ಬೆತ್ತನಗೆರೆ ಶಂಕರ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆ
Advertisement
Advertisement
ಶಂಕರನ ಆಟಾಟೋಪಗಳು ದಿನೇ ದಿನೇ ಹೆಚ್ಚಾಗುತ್ತಿರೋ ಕಾರಣದಿಂದ ಮೈಸೂರಿನಿಂದ ಗಡಿಪಾರು ಮಾಡಲು ಪೊಲೀಸರು ಚಿಂತನೆ ಮಾಡುತ್ತಿದ್ದಾರೆ ಏನ್ನಲಾಗಿದೆ. ಪೊಲೀಸರು ಅಂದುಕೊಂಡಂತೆ ಆದರೆ ಶಂಕರನ ರಾಜಕೀಯ ಪ್ರವೇಶ ಕನಸು ಕನಸಾಗಿಯೇ ಉಳಿಯುತ್ತೆ. ಇದನ್ನೂ ಓದಿ: 3 ದಿನವಾದ್ರೂ ಸಿಗದ ಚಾಲಾಕಿ ಚಿರತೆ – 4ನೇ ದಿನಕ್ಕೆ ಕಾರ್ಯಾಚರಣೆ