ಬೆಂಗಳೂರು: ಕೇಂದ್ರ ಸರ್ಕಾರದ ಜಾನುವಾರು ಹತ್ಯೆ ಹಾಗು ಮಾರಾಟ ನಿಷೇಧ ಆದೇಶ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇವತ್ತು ಭಾರೀ ಗೋ ಜಟಾಪಟಿ ನಡೀತು. ಟೌನ್‍ಹಾಲ್ ಮುಂದೆ ಎಸ್‍ಎಫ್‍ಐ ಪ್ರತಿಭಟನೆಗೆ ಅನುಮತಿ ಕೇಳಿತ್ತು. ಆದ್ರೆ, ಕೇರಳ ಮಾದರಿ ಬೀಫ್ ಫೆಸ್ಟ್ ನಡೆಸಲು ಮುಂದಾದಾಗ ಪೊಲೀಸರು ಅನುಮತಿ ನೀಡಿರಲಿಲ್ಲ. ಆದ್ರೆ ಸಂಜೆ ಹೊತ್ತಿಗೆ ಆಗಮಿಸಿದ ಎಸ್‍ಎಫ್‍ಐ ಕಾರ್ಯಕರ್ತರು ಬೀಫ್ ತಿಂದು ಪ್ರತಿಭಟನೆ ನಡೆಸಲು ಮುಂದಾದ್ರು. ತಡೆಯಲು ಬಂದ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು.
ಇಂದು ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆ/ ಬೀಫ್ ಪೆಸ್ಟ್ ಗೆ ಅನುಮತಿ ನೀಡಿರುವುದಿಲ್ಲ, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. https://t.co/8jabYNIqV2
— BengaluruCityPolice (@BlrCityPolice) May 29, 2017
Advertisement
ಇದಕ್ಕೂ ಮುನ್ನ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ಮಾಡ್ತಿದ್ದಾರೆ ಎಂದು ವಿಷಯ ತಿಳಿದು ಎಸ್‍ಎಫ್‍ಐ ವಿರುದ್ಧವಾಗಿ ಪ್ರತಿಭಟನೆಗೆ ಗೋ ಪರಿಪಾಲಕ ಸಂಘಟನೆಯವರು ಆಗಮಿಸಿದರು. ಎಸ್‍ಎಫ್‍ಐ ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಆಗಮಿಸಿದ ಇವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ಸಂಘಟನೆಯ ಜೊತೆಯಲ್ಲಿ ಬಂದಿದ್ದ ಮಹಿಳೆಯರನ್ನೂ ಪೊಲೀಸರು ಬಂಧಿಸಿದರು. ಒಂದು ಹಂತದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವಂತ ಸನ್ನಿವೇಶ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದಾಗ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದ್ರು. ಈ ಮೂಲಕ ಬೆಂಗಳೂರು ಬೀಫ್ ಫೆಸ್ಟ್ ನಡೆಸಲು ಮುಂದಾಗಿದ್ದ ಎಸ್‍ಎಫ್‍ಐ ಹಾಗೂ ಎಡಪಕ್ಷಗಳ ಕಾರ್ಯಕ್ರಮ ಠುಸ್ ಆಯಿತು.
Advertisement
ದೇಶದ ಬೇರೆ ಕಡೆ ಏನಾಯ್ತು?: ದೇಶಾದ್ಯಂತ ವಿರೋಧ-ಪರವಾದ ನಡೀತಿದೆ. ವಿಶೇಷ ಏನಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಆದೇಶವನ್ನ ಪಾಲನೆ ಮಾಡೋಕೆ ಆಗಲ್ಲ. ಮೇಘಾಲಯದ ಬಿಜೆಪಿಯವರೆಲ್ಲಾ ದನದ ಮಾಂಸ ತಿಂತೇವೆ. ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದನದ ಮಾಂಸ ಮಾರಾಟವನ್ನ ಇನ್ನಷ್ಟು ಸರಳ ಮಾಡ್ತೇವೆ ಅಂತ ಬಿಜೆಪಿ ಮುಖಂಡ ಬರ್ನಾಡ್ ಮರಾಕ್ ಹೇಳಿದ್ದಾರೆ.
Advertisement
ಕೇಂದ್ರದ ಆದೇಶದ ವಿರುದ್ಧವಾಗಿ ಕೇರಳ ರಾಜ್ಯ ತನ್ನದೇ ಪ್ರತ್ಯೇಕ ಕಾನೂನು ಜಾರಿಗೆ ಮುಂದಾಗಿದೆ. ನಾವೇನು ತಿನ್ನಬೇಕು ಅನ್ನೋದನ್ನ ದೆಹಲಿ ಅಥವಾ ನಾಗಪುರ ನಿರ್ಧರಿಸಲು ಸಾಧ್ಯವಿಲ್ಲ. ಅವರು ನಿರ್ಧರಿಸಿದರೆ ಅದನ್ನು ನಾವು ಪಾಲನೆ ಮಾಡಲ್ಲ ಅಂತ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
Advertisement
ಇನ್ನು ಕೇಂದ್ರ ರಾಜ್ಯದ ಅಧಿಕಾರವನ್ನ ಕತ್ತರಿಸ್ತಿದೆ. ರಾಜ್ಯಗಳ ವಿಚಾರದಲ್ಲಿ ಅನವಶ್ಯಕ ಮೂಗು ತೂರಿಸೋದು ಬೇಡ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಎಚ್ಚರಿಸಿದ್ರು. ಆದ್ರೆ, ಕೇರಳದ ಕಣ್ಣೂರಿನಲ್ಲಿ ನಿನ್ನೆ ಸಾರ್ವಜನಿಕವಾಗಿ ದನ ಕಡಿದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ನಡೆಯನ್ನ ರಾಹುಲ್ ಗಾಂಧಿ ಖಂಡಿಸಿದ್ದು, ಕೆಲ ಕಾರ್ಯಕರ್ತರನ್ನ ಪಕ್ಷದಿಂದ ವಜಾ ಮಾಡಿದ್ದಾರೆ. ಇನ್ನು, ಚೆನ್ನೈನಲ್ಲಿ ಪ್ರಗತಿಪರರು ಹಾಗೂ ಅಲ್ಪಸಂಖ್ಯಾತ ಸಮುದಾಯ ಜನ ಮಳೆಯ ಮಧ್ಯೆನೂ ಭಾರಿ ಪ್ರತಿಭಟನೆ ನಡಿಸಿದ್ರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ಕೆಲವು ಮಹತ್ವದ ಬದಲಾವಣೆಗೆ ಮುಂದಾಗಿದೆ. ಜಾನುವಾರುಗಳ ಪಟ್ಟಿಯಿಂದ ಎಮ್ಮೆ, ಕೋಣಗಳನ್ನ ಹೊರಗಿಡಲು ನಿರ್ಧರಿಸಿದೆ ಅಂತ ಮೂಲಗಳಿಂದ ತಿಳಿದುಬಂದಿದೆ.
No permission given for any protest or beef fest at Town hall today. Pl don't heed to rumours. We suggest people to refrain visiting there.
— Dr.Chandragupta, IPS (@DCPCentralBCP) May 29, 2017