ಚಿಕ್ಕೋಡಿ: ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯ ಪ್ರವೇಶಕ್ಕೆ ಯತ್ನಿಸಿರುವ ಖಾಸಗಿ ಬಸ್ ಕಂಪನಿಗಳ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಳ್ಳದಾರಿಯ ಮೂಲಕ ಆರ್‍ಟಿಸಿಪಿಆರ್ ವರದಿ ಇಲ್ಲದೆ ಮುಂಬೈನಿಂದ ಬೆಂಗಳೂರಿಗೆ 17 ಜನ ಪ್ರಯಾಣಿಕರನ್ನು ಖಾಸಗಿ ಕಂಪನಿ ಬಸ್ ರಾಜ್ಯಕ್ಕೆ ಕರೆತರುತ್ತಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ಬಳಿ ಬಸ್‍ನನ್ನು ಪೊಲೀಸರು ತಡೆದಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್: ಹೆಚ್‍ಡಿಕೆ
Advertisement
Advertisement
ಪ್ರಸ್ತುತ ಬಸ್ ಕಂಪನಿಯ ಮ್ಯಾನೇಜರ್, ಮೇಲ್ವಿಚಾರಕ ಅಸ್ಲಂ ಉಲ್ಖಾನ್, ನೇಮುತ್ತಮ್ ಖಾನ್, ಕ್ಲೀನರ್ ಟಿಪ್ಪು ಸುಲ್ತಾನ್ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ಎಂಬ ನಿಯಮ ಮಾಡಿದೆ. ಆ ನಿಯಮವನ್ನು ಖಾಸಗಿ ಬಸ್ ಉಲ್ಲಂಘಿಸಿ, ಕೋವಿಡ್ ವರದಿ ಇಲ್ಲದೆ ಪ್ರಯಾಣಿಕರನ್ನು ತುಂಬಿಕೊಂಡು ಕಳ್ಳ ಮಾರ್ಗದಿಂದ ಬರುತ್ತಿತ್ತು. ಇದನ್ನೂ ಓದಿ: ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ
ಈ ವೇಳೆ ಪೋಲಿಸರು ಬಸ್ ತಡೆಹಿಡಿದಿದ್ದು, ಪದೇ-ಪದೇ ಆದೇಶ ಉಲ್ಲಂಘನೆ ಮಾಡುತ್ತಿದ್ದ ಬಸ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶರ್ಮಾ ಟ್ರಾವೆಲ್ಸ್ ನ್ಯಾಷನಲ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.