ಚಿಕ್ಕಮಗಳೂರು: ಕಾಡುಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ವಾಹನ ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಹೊರನಾಡು ರಸ್ತೆಯಲ್ಲಿ ನಡೆದಿದೆ.
ಜಿಲ್ಲೆಯ ಕಳಸ ಎಎಸ್‍ಐ ಹಾಗೂ ಮೂವರು ಪೇದೆಗಳು ಗುರುವಾರ ರಾತ್ರಿ ಆರೋಪಿಯೊಬ್ಬನನ್ನು ಬಂಧಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
Advertisement
ಆಗಿದ್ದು ಏನು?
ಕಳಸದಿಂದ ತೆರಳುವ ವೇಳೆ ಮಳೆ ಮಾರ್ಗ ಮಧ್ಯೆ ಪ್ರಯಾಣ ನಡೆಸುವ ವೇಳೆ ಕಾಡುಬೆಕ್ಕು ಅಡ್ಡ ಬಂದಿದ್ದು, ಪ್ರಾಣಿಯ ಜೀವ ರಕ್ಷಿಸಲು ಯತ್ನಿಸಿದ ವೇಳೆ ಡ್ರೈವರ್ ಬೊಲೆರೊ ವಾಹನವನ್ನು ಒಂದು ಬದಿಗೆ ಸರಿಸಿದ್ದಾರೆ. ಆದರೆ ಈ ವೇಳೆ ಮಳೆಯಿಂದ ನೀರು ತುಂಬಿಕೊಂಡು ನೆಲ ಹಸಿಯಾಗಿದ್ದ ಕಾರಣ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ವೇಳೆ ವಾಹನದಲ್ಲಿದ್ದ ಯಾವುದೇ ಪೊಲೀಸರಿಗಗೆ ಅಪಾಯ ಸಂಭವಿಸಿಲ್ಲ. ಪೊಲೀಸ್ ವಾಹನ ಪಲ್ಟಿಯಾದ ಪರಿಣಾಮ ಡ್ಯಾಮೇಜ್ ಆಗಿದೆ.