-ಕೇರಳ ಮೂಲದ ಕೆಲ ಯುವಕರಿಂದ ಗಲಭೆಗೆ ಸಂಚು!
ಬೆಂಗಳೂರು: ಮಂಗಳೂರು ಮಾದರಿಯಲ್ಲಿ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಒಳಗಿಂದೊಳಗೆ ಮಸಲತ್ತು ನಡಿಯುತ್ತಿದಿಯಾ ಅನುಮಾನಕ್ಕೆ ಸಾಕ್ಷಿಯಾಗುತ್ತಿವೆ ನಗರದಲ್ಲಿ ನಡೆಯುತ್ತಿರುವ ಘಟನೆಗಳು. ಗಲಭೆ ಸೃಷ್ಟಿಸಲು ಕೇರಳದಿಂದ ಒಂದು ತಂಡ ಬಂದು ಬೆಂಗಳೂರು ಮುಸ್ಲಿಮರನ್ನು ಪ್ರಚೋದಿಸುವ ಕೆಲಸಗಳು ನಡೆಯುತ್ತಿವೆ ಅನ್ನೊ ಅನುಮಾನಗಳು ಪೊಲೀಸರಿಗೆ ಕಾಡತೊಡಗಿದೆ. ಬುಧವಾರ ತಡರಾತ್ರಿ ಮೂವರು ಯುವಕರು ಅನುಮಾನಸ್ಪಾದವಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡು ಹೋಗುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಪ್ತಿಯಲ್ಲಿದ್ದ ಸುದ್ದಗುಂಟೆ ಪಾಳ್ಯ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ತಡೆದು ಯಾರು ಏನು ಅಂತೆಲ್ಲ ಪ್ರಶ್ನೆ ಮಾಡಿದ್ದಾರೆ. ಯುವಕರು ಪೊಲೀಸರಿಗೆ ನೀವು ಯಾರು? ಮೊದಲು ನೀವೇ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಕ್ಕೆ ನಾವು ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿದ್ದಾರೆ. ಪೊಲೀಸರು ಐಡಿ ಕಾರ್ಡ್ ತೋರಿಸಿದ ಮೇಲೆ ಯುವಕರು ತಮ್ಮ ಪುಂಡಾಟವನ್ನು ನಿಲ್ಲಿಸಿಲ್ಲ. ಹೀಗಾಗಿ ಮೂವರನ್ನು ವಶಕ್ಕೆ ಪಡೆದು ಸುದ್ದಗುಂಟೆ ಪಾಳ್ಯ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
Advertisement
ಮೂವರು ಕೂಡ ಯಲಹಂಕದ ರೇವಾ ಕಾಲೇಜಿನಿ ವಿದ್ಯಾರ್ಥಿಗಳು ಕೇರಳ ಮೂಲದವರು ಅನ್ನೋದನ್ನ ದೃಢಪಡಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳು ಚಿಕ್ಕ ಕೇಸ್ ಹಾಕಿ ಕಳಿಸಿಕೊಟ್ಟಿದ್ದಾರೆ. ಠಾಣೆಯಿಂದ ಆಚೆ ಬಂದ ಮಹಮದ್ ವಜೀರ್, ಮಹಮ್ಮದ್ ಶಮಾಮ್ ಮತ್ತು ಆಕರ್ಶ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಬರೆದುಕೊಂಡಿದ್ದಾರೆ. ಬೆಂಗಳೂರು ಪೊಲೀಸರು ನಾವು ಮುಸ್ಲಿಂ ಅನ್ನೋ ಕಾರಣಕ್ಕೆ ನೀವೆಲ್ಲರು ಪಾಕಿಸ್ತಾನಕ್ಕೆ ಹೋಗಿ ಅಂತ ಬೆದರಿಸಿದರು. ಅಷ್ಟೇ ಅಲ್ಲದೇ ನಮ್ಮ ಮಾಹಿತಿಯನ್ನ ಪಡೆದುಕೊಂಡರು. ಎನ್ ಆರ್ ಸಿ 2020 ಅಂತ ಡೈರಿ ಮೇಂಟನ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದೆಲ್ಲ ಬರೆದುಕೊಂಡಿದ್ದಾರೆ.
Advertisement
ಪೊಲೀಸರು ಕೆಲವೊಂದು ಮಹತ್ವವಲ್ಲದೇ ಕೇಸ್ ಗಳಿಗೆ ಎನ್‍ಸಿಆರ್ ಮಾಡಿ ಕಳಿಸಿಕೊಡಲು ನೋಂದಣಿ ಪುಸ್ತಕ ಇಟ್ಟಿರುತ್ತಾರೆ. ಅದನ್ನೇ ಯುವಕರು ಎನ್‍ಆರ್‍ಸಿ 2020 ಅಂತ ಇಟ್ಟಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಗಲಭೆ ಸೃಷ್ಟಿಸಲು ಸಂಚು ನಡೆದಿದೆಯಾ ಎಂಬ ಅನುಮಾನಗಳು ಪೊಲೀಸರನ್ನು ಕಾಡುತ್ತಿವೆ. ಈ ಕೂಡಲೇ ಗಲಭೆಗೆ ಪ್ಲಾನ್ ಮಾಡಿಕೊಂಡಿರುವವರನ್ನು ಮಟ್ಟ ಹಾಕಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.