Connect with us

Bengaluru City

ಕುಡಿದ ಮತ್ತಿನಲ್ಲಿ ವಾಹನಗಳಿಗೆ ತೊಂದರೆ ಕೊಡ್ತಿದ್ದ ವ್ಯಕ್ತಿಗೆ ಲಾಠಿಯೇಟು

Published

on

ಬೆಂಗಳೂರು: ಕುಡಿದು ರಸ್ತೆಯಲ್ಲಿ ರಂಪಾಟ ಮಾಡಿ ಚಲಿಸುವ ವಾಹನಗಳಿಗೆ ತೊಂದರೆ ಕೊಡುತ್ತಿದ್ದ ವ್ಯಕ್ತಿಗೆ ಪೊಲೀಸರು ಧರ್ಮದೇಟು ನೀಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರು ಹೊರ ವಲಯದ ದಾಸರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೆಗ್ಗನಹಳ್ಳಿ ಕ್ರಾಸ್ ನ ನಿವಾಸಿ 38 ವರ್ಷದ ಯಲ್ಲಪ್ಪ ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿ ಯಲ್ಲಪ್ಪನ ಗಲಾಟೆ, ಹೆಚ್ಚಾದಂತೆ ಪೊಲೀಸರು ಹೊಯ್ಸಳ ವಾಹನದಲ್ಲಿ ಕರೆದೊಯ್ಯಲು ಹರಸಾಹಸ ಪಟ್ಟಿದ್ದಾರೆ.

ಬಾಗಲಗುಂಟೆ ಪೊಲೀಸರು ಕೊನೆಗೆ ಯಲ್ಲಪ್ಪನನ್ನು ಲಾಠಿಯಿಂದ ಬೆಂಡೆತ್ತಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *