ಮಂಗಳೂರು: ಭಾರೀ ವಿರೋಧದ ನಡುವೆಯೂ ಕೆಲ ಮಹಿಳೆಯರು ಶಬರಿಮಲೆ ಅಯ್ಯಪ್ಪನ ದರ್ಶನವನ್ನು ಮಾಡಿದ್ದರು. ಈಗ ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ ಇಬ್ಬರು ಯುವತಿಯರನ್ನು ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮಂಗಳೂರಿನ ಅಯ್ಯಪ್ಪ ಭಕ್ತರು ಯುವತಿಯರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಆಂಧ್ರ ಪ್ರದೇಶದ ಮೂಲದ ಯುವತಿಯರು ಅಯ್ಯಪ್ಪ ಭಕ್ತರ ಸೋಗಿನಲ್ಲಿ ತೆರಳುತ್ತಿದ್ದರು. ಇದನ್ನು ಮಂಗಳೂರು ಅಪ್ಪಯ್ಯ ಭಕ್ತರು ಪತ್ತೆ ಮಾಡಿದ್ದು, ಕೂಡಲೇ ಯುವತಿಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!
ಶಬರಿಮಲೆ ಅಪ್ಪಯ್ಯನ ದರ್ಶನಕ್ಕೆ ಬರುವವರನ್ನು ಅಲ್ಲಿನ ಭಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮಾಲಾಧಾರಣೆ ಮಾಡಿ ಬಂದವರ ಮೇಲೆ ಹೆಚ್ಚಿನ ಗಮನವಿಡುತ್ತಿದ್ದಾರೆ. ಇಬ್ಬರು ಯುವತಿಯರು ಮಂಗಳೂರಿನಿಂದ ಮಾಲಾಧಾರಣೆ ಧಿರಿಸಿನಲ್ಲಿ ಹೋಗಿದ್ದು, ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದಾರೆ. ಇದೇ ರೈಲು ನಿಲ್ದಾಣದಲ್ಲಿ ಮಂಗಳೂರಿನಿಂದ ಹೋಗಿದ್ದ ಭಕ್ತರು ಇಳಿದಿದ್ದಾರೆ. ಆಗ ಅವರ ಅನುಮಾನದ ಮೇಲೆ ಅವರನ್ನು ಪ್ರಶ್ನೆ ಮಾಡಿದ್ದು, ಬಳಿಕ ಅಲ್ಲಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಎಂಟ್ರಿಗೆ ಕೊಡಗಲ್ಲೇ ಸ್ಕೆಚ್- ಲಾಡ್ಜ್‌ನಲ್ಲಿ ಉಳಿದಿದ್ರು ಬಿಂದು, ಕನಕದುರ್ಗ
ಅಪ್ಪಯ್ಯನ ದರ್ಶನ ಮಾಡಲು ಬಂದಿದ್ದೇವೆ. ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದರ್ಶನ ಮಾಡುತ್ತೇವೆ ಎಂದು ಯುವತಿಯರು ಹೇಳಿದ್ದಾರೆ. ಆದರೆ ಅಲ್ಲಿದ್ದ ಎಲ್ಲರು ಅವರ ಪ್ರವೇಶವನ್ನು ವಿರೋಧಿಸಿದ್ದು, ಪೊಲೀಸರು ಸುರಕ್ಷತೆ ದೃಷ್ಟಿಯಿಂದ ಕರೆದುಕೊಂಡು ಹೋಗಿ ಬಳಿಕ ಅವರನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ `ಮೂರನೇ ಮಹಿಳೆ’..!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv



