ಗಲ್ವಾನ್ ಹುತಾತ್ಮನಾದ ಮಗನ ನೆನಪಿನಲ್ಲಿ ಅಕ್ರಮ ಸ್ಮಾರಕ ನಿರ್ಮಾಣ – ತಂದೆ ಅರೆಸ್ಟ್

Public TV
2 Min Read
bihar Galwan martyr

ಪಾಟ್ನಾ: 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ (Galwan Valley) ಚೀನಾದ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಸೇನಾಧಿಕಾರಿ (Soldier) ಜೈ ಕಿಶೋರ್ ಸಿಂಗ್ (Jai Kishore Singh) ಅವರ ತಂದೆ ತನ್ನ ಮಗನ ನೆನಪಿಗಾಗಿ ಕಾನೂನು ಬಾಹಿರವಾಗಿ ಸ್ಮಾರಕವನ್ನು (Memorial) ನಿರ್ಮಿಸಿದಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬಿಹಾರದ (Bihar) ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, ಪೊಲೀಸರು ಅಕ್ರಮವಾಗಿ ಸ್ಮಾರಕವನ್ನು ನಿರ್ಮಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಶನಿವಾರ ಮಧ್ಯರಾತ್ರಿ ಹುತಾತ್ಮ ಯೋಧನ ತಂದೆಯನ್ನು ಪೊಲೀಸರು ಠಾಣೆಗೆ ಎಳೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.

bihar Galwan martyr 1

ವರದಿಗಳ ಪ್ರಕಾರ ಜೈ ಕಿಶೋರ್ ಸಿಂಗ್ ಅವರ ತಂದೆ ರಾಜ್ ಕಪೂರ್ ಸಿಂಗ್ ಕಳೆದ ವರ್ಷ ಫೆಬ್ರವರಿ 24 ರಂದು ತಮ್ಮ ಮಗನ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿದ್ದರು. ಸ್ಮಾರಕದ ಉದ್ಘಾಟನೆ ಸಂದರ್ಭ ಹಲವಾರು ಸ್ಥಳೀಯರು ಹಾಗೂ ಸರ್ಕಾರಿ ಅಧಿಕಾರಿಗಳು ಕೂಡಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಕಳೆದ 2 ತಿಂಗಳಿನಿಂದ ಹುತಾತ್ಮ ಯೋಧನ ಕುಟುಂಬಕ್ಕೆ ತೊಂದರೆ ಪ್ರಾರಂಭವಾಗಿದೆ.

ರಾಜ್ ಕಪೂರ್ ಸಿಂಗ್ ಅವರ ನೆರೆಹೊರೆಯವರಾದ ಹರಿನಾಥ್ ರಾಮ್ ಅಕ್ರಮವಾಗಿ ಸ್ಮಾರಕವನ್ನು ನಿರ್ಮಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜ್ ಕಪೂರ್ ಸ್ಮಾರಕದ ಸುತ್ತಲೂ ಗೋಡೆಯನ್ನು ನಿರ್ಮಿಸಿದ್ದು, ಇದು ತಮ್ಮ ಮನೆಯ ದಾರಿಗೆ ಅಡ್ಡಲಾಗಿ ಕಟ್ಟಲಾಗಿದೆ, ಮನೆಗೆ ತೆರಳಲು ಇದು ನಿರ್ಬಧಿಸುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

ರಾಜ್ ಕಪೂರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 188, 323, 504, 506 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅವರನ್ನು ಬಂಧಿಸಲಾಗಿದೆ.

bihar Galwan martyr 2

ಈ ಬಗ್ಗೆ ಮಾಹಿತಿ ನೀಡಿರುವ ಜೈ ಕಿಶೋರ್ ಸಿಂಗ್ ಸಹೋದರ ನಂದ್ ಕಿಶೋರ್, 15 ದಿನಗಳಲ್ಲಿ ಸ್ಮಾರಕವನ್ನು ತೆಗೆದು ಹಾಕಲು ಪೊಲೀಸರು ನಮಗೆ ಗಡುವು ನೀಡಿದ್ದರು. ಆದರೆ ಅದಕ್ಕೂ ಮುನ್ನವೇ ನಮ್ಮ ತಂದೆಯವರನ್ನು ರಾತ್ರೋರಾತ್ರಿ ಬಂಧಿಸಿ, ಹೊಡೆದು, ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ

ದೂರುದಾರರು ಸ್ಮಾರಕ ನಿರ್ಮಾಣದ ಕಾರಣದಿಂದ ತಮ್ಮ ಮನೆಗೆ ತೆರಳಲು ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ರಾಜ್ ಕಪೂರ್ ಸಿಂಗ್‌ನನ್ನು ಬಂಧಿಸಲಾಗಿದೆ ಎಂದು ಡಿಎಸ್‌ಪಿ ಮಹುವಾ ಪೂನಂ ಕೇಸರಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *