ಚೆನ್ನೈ: ಚಲಿಸುತ್ತಿದ್ದ ರೈಲಿನಲ್ಲಿ (Train) ಮೂವರು ಕಾಲೇಜು ವಿದ್ಯಾರ್ಥಿಗಳು (Student) ಮಚ್ಚಿನಂತಹ ಆಯುಧಗಳನ್ನು ಹಿಡಿದುಕೊಂಡು ಸಾಹಸ ಪ್ರದರ್ಶನ ಮಾಡಿ ವೀಡಿಯೋ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಈ ಬಗ್ಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಚೆನ್ನೈನಲ್ಲಿ (Chennai) ಮೂವರು ವಿದ್ಯಾರ್ಥಿಗಳು ಚಲಿಸುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಮಚ್ಚನ್ನು ಹಿಡಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಗುಮ್ಮಿಡಿಪೂಂಡಿಯ ಅನ್ಬರಸು ಮತ್ತು ರವಿಚಂದ್ರನ್ ಮತ್ತು ಪೊನ್ನೇರಿಯ ಅರುಳ್ ಎಂಬ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ (Artrst).
Advertisement
We would like to inform you that the 3 youths seen in this viral video performing stunts with sharp weapons in their hand, have been arrested by @grpchennai! They are Anbarasu and Ravichandran from Gummidipoondi and Arul from Ponneri. They are all students of Presidency College. pic.twitter.com/3FQVpTWeoW
— DRM Chennai (@DrmChennai) October 11, 2022
Advertisement
ವೀಡಿಯೋದಲ್ಲಿ ಈ ಮೂವರು ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿದ್ದು, ಅವರೆಲ್ಲರೂ ಪ್ಲಾಟ್ ಫಾರ್ಮ್‌ನ ಮೇಲೆ ಲಾಂಗ್, ಮಚ್ಚನ್ನು ಎಳೆದುಕೊಂಡು ಕೆಲವು ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಭಯ ಹುಟ್ಟಿಸುತ್ತಿತ್ತು. ಇದನ್ನೂ ಓದಿ: 2025ರೊಳಗೆ ದೇಶದ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್ ಇಂಜಿನ್ – ರೈಲ್ವೆ ಇಲಾಖೆ
Advertisement
Advertisement
ಈ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಇಂತಹ ದುರ್ವರ್ತನೆ ಹಾಗೂ ಅಪಾಯಾಕಾರಿ ಸಾಹಸಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರ ಸುರಕ್ಷತೆಗಾಗಿ ನಾವು ಯಾವಾಗಲೂ ಬದ್ಧರಾಗಿದ್ದೇವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದರು. ಇದನ್ನೂ ಓದಿ: ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ