ಹನುಮಂತಪ್ಪ ತಿಪ್ಪೇಸ್ವಾಮಿ ರಂಗಸ್ವಾಮಿ
ದಾವಣಗೆರೆ: ಜಿಲ್ಲೆಯ ಶಿರಮಗೊಂಡನಹಳ್ಳಿ ಬಳಿ ಮಾನಸಿಕ ಅಸ್ವಸ್ಥನನ್ನು ಕುಟುಂಬದವರೇ ಕೊಲೆ ಮಾಡಿ ಭದ್ರ ನಾಲೆಗೆ ಎಸೆದಿದ್ದು, ಕೊಲೆ ಮಾಡಿದ್ದ 21 ದಿನಗಳ ಬಳಿಕ ಟ್ಯಾಟೂ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಪೆನಹಳ್ಳಿಯ ಜಗದೀಶ್ ಕೊಲೆಯಾದ ದುರ್ದೈವಿ. ಇದೇ ತಿಂಗಳ 2ರಂದು ಕೊಲೆ ಮಾಡಲಾಗಿತ್ತು. ಆದರೆ 20 ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಬಳಿ ಮೃತ ದೇಹ ಪತ್ತೆಯಾಗಿತ್ತು. ಇಂದು ತನಿಖೆಯ ನಂತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.
Advertisement
Advertisement
ಕೊಲೆಯಾದ ಜಗದೀಶ್
Advertisement
ಏನಿದು ಪ್ರಕರಣ?
ಅಕ್ಟೋಬರ್ 20ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಬಳಿ ಕೈ ಕಟ್ಟಿದ ಮೃತ ದೇಹ ಪತ್ತೆಯಾಗಿತ್ತು. ವಿದ್ಯಾನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತ ವ್ಯಕ್ತಿಯ ಎರಡು ಕೈಗಳ ತೋಳಿನ ಮೇಲೆ ಅರ್ಜುನ್, ಬಾಲಾಜಿ ಎಂಬ ಹೆಸರಿನ ಹಚ್ಚೆ ಪತ್ತೆಯಾಗಿದೆ. ಬಳಿಕ ಜಗದೀಶ್ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿತ್ತು.
ಟ್ಯಾಟೂ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದವ ಮಾನಸಿಕ ಅಸ್ವಸ್ಥನಾಗಿದ್ದು, ಕುಟುಂಬದವರ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಂದೆ ಹನುಮಂತಪ್ಪ, ಅಣ್ಣ ರಂಗಸ್ವಾಮಿ, ಬಾಮೈದ ತಿಪ್ಪೇಸ್ವಾಮಿ ಕೊಲೆ ಮಾಡಿ ಭದ್ರಾ ನಾಲೆಗೆ ಎಸೆದಿದ್ದಾರೆ. ತನಿಖೆ ನಡೆಸಿದಾಗ ಕೊಲೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಮೃತ ಜಗದೀಶ್ ತನ್ನ ಮಕ್ಕಳ ಹೆಸರಾದ ಬಾಲಾಜಿ ಮತ್ತು ಅರ್ಜುನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ತನಿಖೆ ನಡೆಸಿ ಕೊಲೆ ಅರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv