ಬೆಂಗಳೂರು: ನಕಲಿ ಕೀಗಳನ್ನ ಮಾಡಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಾಜಿ ಪ್ರಕಾಶ್ ಬಂಧಿತ ಮನೆಗಳ್ಳ. ಈತ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಡೌಟ್ ಬರದ ರೀತಿಯಲ್ಲಿ ತನ್ನ ಕೈಚಳ ತೋರಿ ಪರಾರಿಯಾಗುತ್ತಿದ್ದನು. ಈತನು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‍ಗಳನ್ನೇ ಟಾರ್ಗೆಟ್ ಮಾಡುತ್ತಿದ್ದನು. ಕಳ್ಳತನ ಕೇಸ್‍ನಲ್ಲಿ ಒಂದು ಬಾರಿ ಜೈಲಿಗೂ ಹೋಗಿದ್ದನು. ಅಲ್ಲಿಂದ ಬಂದ ಮೇಲೆ ಮತ್ತೆ ಕೆಜಿ, ಕೆಜಿ ಚಿನ್ನಾಭರಣ ದೋಚಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Advertisement
Advertisement
ಕಳ್ಳತನ ಹೇಗೆ ಮಾಡುತ್ತಿದ್ದ:
ಬಾಡಿಗೆ ಪಡೆಯುವ ರೀತಿಯಲ್ಲಿ ಅಪಾರ್ಟ್ ಮೆಂಟ್‍ಗೆ ಹೋಗುತ್ತಿದ್ದನು. ಆಗ ಅಲ್ಲಿನ ಮನೆಯ ಕೀ ಫೋಟೋ ಕ್ಲಿಕ್ಕಿಸಿಕೊಂಡು ಬಂದು ನಕಲಿ ಕೀ ತಯಾರು ಮಾಡಿಕೊಳ್ಳುತ್ತಿದ್ದನು. ನಂತರ ಅಪಾರ್ಟ್ ಮೆಂಟ್‍ನ ಅದೇ ಮನೆಗೆ ಹೋಗಿ ಯಾರೂ ಇಲ್ಲದ ವೇಳೆ ನೋಡಿಕೊಂಡು ನಕಲಿ ಕೀ ಬಳಸಿ ಕಳ್ಳತನ ಮಾಡಿಕೊಂಡು ಬರುತ್ತಿದ್ದನು.
Advertisement
ನಕಲಿ ಕೀ ಬಳಸಿ ಈತ ಆಗ್ನೇಯ ವಿಭಾಗದ ಕೋರಮಂಗಲ, ಮೈಕೋಲೇಔಟ್, ಸುದ್ಗಂಟೆ ಪಾಳ್ಯ, ಸೇರಿ ಹಲವೆಡೆ ತಮ್ಮ ಕೈಚಳಕ ತೋರಿದ್ದಾನೆ. ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ಲಕ್ಷ ಬೆಲೆಬಾಳುವ ಬರೋಬ್ಬರಿ 1 ಕೆ.ಜಿ 260 ಗ್ರಾಂ ಚಿನ್ನಾಭರಣ ಕದ್ದಿದ್ದನು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಹೇಳಿದ್ದಾರೆ.
Advertisement
ಸದ್ಯ ಆರೋಪಿಯಿಂದ ಪೊಲೀಸರು ಬರೋಬ್ಬರಿ ಒಂದು ಕಾಲು ಕೆ.ಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಸಾವಿರಕ್ಕೂ ಹೆಚ್ಚು ನಕಲಿ ಕೀಗಳು ಮತ್ತು ಕೀ ಮೆಕರ್ ವಶಪಡಿಕೊಂಡಿದ್ದಾರೆ. ಆರೋಪಿ ಪ್ರಕಾಶ್ ಬಂಧನದ ಬಳಿಕ ಎಂಟು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.