ಹಾಸನ: ತಾನು ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿಲ್ಲ ಎಂಬುದನ್ನು ಸಾಬೀತುಪಡಿಸಲು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಯುವಕನ ಅಸಲಿಯತ್ತು ಇದೀಗ ಬಯಲಾಗಿದೆ.
ಆರೋಪಿ ಸಂದೀಪ್ ಅತ್ಯಾಚಾರ ಎಸಗಿರುವ ವೀಡಿಯೋ ಲಭ್ಯವಾಗಿದ್ದು, ನಾಟಕವಾಡಿದ್ದವನ ಅಸಲಿ ಸತ್ಯ ಬಯಲಾಗಿದೆ. ಆರೋಪಿ ಸಂದೀಪ್ ವಿಷ ಕುಡಿದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಇತ್ತ ಪೊಲೀಸರು ಆತನ ಫೋನ್ ವಶಪಡಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದರು. ನಂತರ ತನಿಖೆ ಮಾಡುವ ವೇಳೆ ಪೊಲೀಸರು ಆರೋಪಿಯ ಫೋನ್ ಪರಿಶೀಲನೆ ಮಾಡುವಾಗ ಕಾರಿನಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಸೆರೆ ಹಿಡಿದಿರುವುದು ಕಂಡುಬಂದಿದೆ.
1.19 ನಿಮಿಷದ ಈ ವಿಡಿಯೋದಲ್ಲಿ ಚಲಿಸುವ ಕಾರಿನಲ್ಲೇ ಹುಡುಗಿಯ ಮೇಲೆ ಅತ್ಯಾಚಾರ ಎಸಗುವ ದೃಶ್ಯವನ್ನು ಸಂದೀಪ್ ಸೆರೆ ಹಿಡಿದಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಆರೋಪಿ ಸಂದೀಪ್ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಹುಡುಗಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದನು. ನಂತರ ಆಕೆಗೆ ಮತ್ತು ಬರುವ ಔಷಧ ಬೆರೆಸಿದ ಜ್ಯೂಸ್ ಕುಡಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಕ್ಕೆ ಗುರಿಯಾಗಿದ್ದನು.
ಈ ಆರೋಪದಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಾನು ವಿಷ ಕುಡಿಯುವ ವಿಡಿಯೋವನ್ನು ತನ್ನ ಅಪ್ಪ ಅಮ್ಮನಿಗೆ ಕಳುಹಿಸಿದ್ದನು. ಈ ವೀಡಿಯೋವನ್ನಿಟ್ಟುಕೊಂಡು ಆತನ ಪೋಷಕರು ತಮ್ಮ ಮಗ ಅಮಾಯಕ ಆ ಹುಡುಗಿಯೇ ತಮ್ಮ ಮಗನಿಗೆ ಮೆಸೇಜ್ ಕಳುಹಿಸುತ್ತಿದ್ದಳು ಎಂದು ಆರೋಪಿಸಿದ್ದರು. ಹಾಸನ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು.